Mon. Dec 23rd, 2024

ಬೇಸಿಗೆಯಲ್ಲಿ ಚರ್ಮ ರಕ್ಷಣೆಗೆ ಸರಳ ವಿಧಾನಗಳು

Skin-Care
Share this with Friends

ಬೇಸಿಗೆ ಒಂದು ರೀತಿ ಶತ್ರುವು ಹೌದು ಮಿತ್ರನೂ ಹೌದು. ಸೂರ್ಯ ನಮ್ಮ ಬದುಕಿಗೆ ಏನೆಲ್ಲಾ ಕೊಡುಗೆಯನ್ನು ನೀಡಿದ್ದಾನೆ. ಸೂರ್ಯನಿಲ್ಲದೇ ನಮ್ಮ ಜೀವನ ಸಾಗದು. ಇನ್ನೊಂದೆಡೆ ಸೂರ್ಯನ ನೇರಳಾತೀತ (ಆಲ್ಟ್ರಾವೈಲೆಟ್) ವಿಕಿರಣಕ್ಕೆ ನಮ್ಮ ದೇಹ ತೆರೆದುಕೊಳ್ಳುವುದರಿಂದ ಬಹುತೇಕ ಎಲ್ಲ ರೀತಿಯ ಕ್ಯಾನ್ಸರ್ ರೋಗಗಳಿಗೆ ಕಾರಣವಾಗುತ್ತದೆ. ಅಲ್ಲದೆ, ನೀವು ಯೋಚಿಸುವುದಕ್ಕಿಂತ ತಂಬಾ ಸುಲಭವಾಗಿ ಸನ್‍ಬರ್ನ್ ದಾಳಿ ಮಾಡುತ್ತದೆ.

ಅದೃಷ್ಟವಶಾತ್, ಸೂರ್ಯನ ಅಪಾಯಕಾರಿ ಕಿರಣಗಳಿಂದ ರಕ್ಷಿಸಿಕೊಳ್ಳಲು ಅನೇಕ ಸುಲಭ ಮಾರ್ಗಗಳಿವೆ. ಸೂರ್ಯ ಪ್ರಖರವಾಗಿ ಉರಿಯುತ್ತಿರುವಾಗ ಮತ್ತು ಬಿಸಿಲಿನ ಝಳ ಅಧಿಕವಿದ್ದಾಗ ಅದರಿಂದ ರಕ್ಷಿಸಿಕೊಳ್ಳುವ ವಿಧಾನವೇ ಸನ್ ಪ್ರೊಟೇಕ್ಷನ್. ಸುರಕ್ಷತಾ ಬಟ್ಟೆಗಳನ್ನು ತೊಡಬೇಕು, ಅಗಲ ಅಂಚು ಇರುವ ಟೋಪಿ ಹಾಕಿಕೊಳ್ಳಬೇಕು ಮತ್ತು ಸನ್‍ಗ್ಲಾಸ್‍ನನ್ನು ಧರಿಸಬೇಕು. ಸನ್ ಸ್ಕ್ರೀನ್‍ನನ್ನು ಕೂಡ ಬಳಸಬಹುದು.

ಸನ್‍ಬರ್ನ್‍ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹಾಗೂ ನಿಮ್ಮ ಚರ್ಮ ಆರೋಗ್ಯಕರವಾಗಿ ಮತ್ತು ಚಿರ ಯೌವನವಾಗಿ ಕಾಣಲು ಇಲ್ಲಿ ಕೆಲವು ಸರಳ ಕ್ರಮಗಳನ್ನು ನೀಡಲಾಗಿದೆ.
✦ಹೊರಗೆ ಹೋಗುವುದಕ್ಕೆ ಮೊದಲು ಸನ್ ಸ್ಕ್ರೀನ್ ಹಾಕಿಕೊಳ್ಳುವುದನ್ನು ಮರೆಯದಿರಿ.
✦ನೀವು ಬಿಸಿಲಿನಲ್ಲಿ ಹೊರಗೆ ದೀರ್ಘ ಕಾಲ ಇರಬೇಕಾದ ಸಂದರ್ಭ ಬಂದರೆ ಅದಕ್ಕೆ ಅನುಗುಣವಾಗಿ ಬಟ್ಟೆಗಳನ್ನು ಧರಿಸಿ.
✦ಸೂರ್ಯನ ತಾಪ ಪ್ರಖರವಾಗಿರುವ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಹೊರಗೆ ಇರುವುದನ್ನು ಸಾಧ್ಯವಾದಷ್ಟು ತಪ್ಪಿಸಿ.
✦ನಿಮ್ಮ ಮುಖಕ್ಕೆ ಹೆಚ್ಚುವರಿ ರಕ್ಷಣೆ ನೀಡಲು ದೊಡ್ಡ ಅಂಚಿನ ಟೋಪಿ ಬಳಸಿ.

✦ ಬೇಸಿಗೆ ಮತ್ತು ಕೂದಲಿನ ರಕ್ಷಣೆ
ಬೇಸಿಗೆಯಲ್ಲಿ ಧಗಧಗಿಸುವ ಸೂರ್ಯ, ಬಿಸಿಲಿನ ಝಳ, ಅಧಿಕ ತಾಪಮಾನ ಮತ್ತು ವಾತಾವರಣದ ಆದ್ರತೆಯಿಂದ ನಿಮ್ಮ ಕೂದಲಿಗೆ ಹಾನಿಯಾಗುತ್ತದೆ. ಪರಿಣಾಮವಾಗಿ ಕೂದಲು ಒಣಗುವಿಕೆ, ಒರಟಾಗುವಿಕೆ, ಇಬ್ಭಾಗವಾಗುವಿಕೆಯಂಥ ಸಮಸ್ಯೆಗಳು ಕಂಡುಬರುತ್ತದೆ. ಬೇಸಿಗೆಯಲ್ಲಿ ಧಗಧಗಿಸುವ ಸೂರ್ಯ, ಬಿಸಿಲಿನ ಝಳ, ಅಧಿಕ ತಾಪಮಾನ ಮತ್ತು ವಾತಾವರಣದ ಆದ್ರತೆಯಿಂದ ನಿಮ್ಮ ಕೂದಲಿಗೆ ಹಾನಿಯಾಗುತ್ತದೆ. ಪರಿಣಾಮವಾಗಿ ಕೂದಲು ಒಣಗುವಿಕೆ, ಒರಟಾಗುವಿಕೆ, ಇಬ್ಭಾಗವಾಗುವಿಕೆಯಂಥ ಸಮಸ್ಯೆಗಳು ಕಂಡುಬರುತ್ತದೆ.

ನಿಮ್ಮ ಕೂದಲಿಗೆ ವಿಶೇಷ ಆಲ್ಟ್ರಾ ವಯಲೆಟ್ ಪ್ರೊಟೇಕ್ಷನ್ ಬಳಸಿ. ಸಾಧ್ಯವಾದರೆ ಅಗಲ ಅಂಚು ಇರುವ ಉತ್ತಮ ಟೋಪಿ ಬಳಸಿ ಅಥವಾ ನಿಮ್ಮ ಕೂದಲನ್ನು ಮರೆಮಾಚುವ ಸ್ಕಾರ್ಪ್ ಬಳಸಿ. ನೀವು ರಜೆಯಲ್ಲಿದ್ದಾಗ ನಿಮ್ಮ ಕೂದಲಿನ ಬಣ್ಣ ಬದಲಿಸಬೇಡಿ. ನಿಮ್ಮ ಕೂದಲಿಗೆ ಒಳ್ಳೆಯ ಕಂಡಿಷನರ್ ಹಾಕಿ.

✦ ಬೇಸಿಗೆ ಮತ್ತು ಆಹಾರ :
ಬೇಸಿಗೆ ಕಾಲದಲ್ಲಿ ಆಹಾರದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಉಷ್ಣಾಂಶ ಅಧಿಕವಾಗಿರುವ ಕಾರಣ ಅನೇಕರು ಹೊರಗೆ ಅಡುಗೆ ಮಾಡುವ ಸಾಧ್ಯತೆಗಳಿರುತ್ತವೆ. ಬೇಸಿಗೆಯಲ್ಲಿ ಅಹಾರದ ಬಗ್ಗೆ ವಹಿಸಬೇಕಾದ ಕ್ರಮಗಳೆಂದರೆ:

ತೀರಾ ತಣ್ಣಗಿರುವ ದ್ರವರೂಪದ ಅಹಾರ ಸೇವಿಸಬೇಡಿ. ಕೆಫೆನ್ ಮತ್ತು ಕಾರ್ಬೊನೇಟೆಡ್ ಪಾನೀಯ-ಪೇಯಗಳು, ಅಲ್ಕೋಹಾಲ್ ಮತ್ತು ಸಕ್ಕರೆ ಹೆಚ್ಚಾಗಿರುವ ಆಹಾರವನ್ನು ಸೇವಿಸಬಾರದು.* ಬಾಯಾರಿಕೆ ನೀಗಿಸಿಕೊಳ್ಳಲು ನೀರು ಅತ್ಯುತ್ತಮ ಆಯ್ಕೆ.

ತೀರಾ ಪರಿಶ್ರಮದಾಯಕ ಕೆಲಸವನ್ನು ಮಿತಿಗೊಳಿಸಿ. ಶುಷ್ಕ ಫಲಗಳ ಸೇವನೆ ಕಡಿಮೆ ಮಾಡಿ. ಸಕ್ಕರೆ ಅಧಿಕವಾಗಿರುವ ಆಹಾರವನ್ನು ಅದಷ್ಟೂ ತಪ್ಪಿಸಿ. ಹುರಿದ ಆಹಾರ ಸೇವನೆಯನ್ನು ಕಡಿತಗೊಳಿಸಿ. ಉತ್ತಮ ಶುಚಿತ್ವ ಮಟ್ಟವನ್ನು ಕಾಪಾಡಿ. ನಿಮ್ಮ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳು ಹೆಚ್ಚಾಗಿರಲಿ.

✦ಬೇಸಿಗೆ ಮತ್ತು ವಸ್ತ್ರ :
ಬೇಸಿಗೆಯಲ್ಲಿ ಸೂಕ್ತವಾದ ವಸ್ತ್ರ ಧರಿಸುವುದು ಮುಖ್ಯ. ನೀವು ಎಲ್ಲೇ ಇರಲಿ ಅದಕ್ಕೆ ಅನುಗುಣವಾಗಿ ಬಟ್ಟೆಗಳನ್ನು ತೊಡಬೇಕಾಗುತ್ತದೆ. ಮಹಿಳೆಯರು ಹೂ ಮುಡಿದರೆ ಅದು ತಾಜಾತನ ಮತ್ತು ಸ್ಪೂರ್ತಿಯ ಅನುಭವ ನೀಡುತ್ತದೆ. ಬೇಸಿಗೆಯಲ್ಲಿ ಒಂದೇ ಬಣ್ಣದ ಸಾದಾ ವಸ್ತ್ರ ಧರಿಸಿ. ಬೇಸಿಗೆಯಲ್ಲಿ ಬಿಗಿಯಾದ ಉಡುಪಿಗಿಂತ ಸ್ವಲ್ಪ ಸಡಿಲವಾದ ವಸ್ತ್ರ ಒಳ್ಳೆಯದು.

ಗಾಢ ಮತ್ತು ಕಡು ವರ್ಣದ ಬಟ್ಟೆಗಳು ಬೇಡ ನೀವು ಧರಿಸುವ ವಸ್ತ್ರ ತೇಳುವಾಗಿದ್ದರೆ ಒಳ್ಳೆಯದು. ಬೇಸಿಗೆಯಲ್ಲಿ ಕಾಟನ್ ವಸ್ತ್ರ ಉತ್ತಮ. ಡೆಕ್ ಶೂಗಳೊಂದಿಗೆ ಸಾಕ್ಸ್ ಬೇಡ.

✦ಬೇಸಿಗೆ ಮತ್ತು ನೇತ್ರ ಆರೈಕೆ :
ಬೇಸಿಗೆಯಲ್ಲಿ ಕಣ್ಣುಗಳಿಗೆ ಸೋಂಕು ತಗಲುವ ಸಾಧ್ಯತೆ ಇದೆ. ತಾಪಮಾನ ಅಧಿಕವಾಗಿರುವ ಕಾರಣ ಕಣ್ಣುರಿ, ಕಣ್ಣು ಒಣಗುವಿಕೆ. ಕೆಂಗಣ್ಣಿನ ತೊಂದರೆ ಕಂಡುಬರುತ್ತದೆ. ಈ ಋತುವಿನಲ್ಲಿ ಕಣ್ಣುಗಳ ಆರೈಕೆ ಮುಖ್ಯ. ಅಲ್ಟ್ರಾವಯಲೆಟ್ ರಕ್ಷಣೆ ಇರುವ ಸನ್‍ಗ್ಲಾಸ್ ಬಳಸಿ. ಮೋಡ ಮುಸುಕಿದ ವಾತಾವರಣವಿದ್ದಾಗಲೂ ಸನ್‍ಗ್ಲಾಸ್ ಧರಿಸಿ. ದೊಡ್ಡಗಾತ್ರದ ಸನ್‍ಗ್ಲಾಸ್ ಧರಿಸಿ. ಪೋಲರೈಸ್ಡ್ ಲೆನ್ಸ್‍ಗಳಿರುವ ಸನ್‍ಗ್ಲಾಸ್ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಕನ್ನಡಕವನ್ನು ಸರಿಯಾದ ಸ್ಥಿತಿಯಲ್ಲಿಟ್ಟುಕೊಳ್ಳಿ. ವಿಪರೀತ ಬಿಸಿಲಿನಲ್ಲಿ ಸಂಚರಿಸುವುದನ್ನು ನಿಯಂತ್ರಿಸಿ.

✦ಬೇಸಿಗೆ ಮತ್ತು ಪ್ರವಾಸ ಟಿಪ್ಸ್ :
ಪ್ಯಾಕ್ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಸ್ಕಿನ್ ಕ್ರೀಮ್, ಹೇರ್ ಸ್ಪ್ರೆ, ಬಾಡಿ ಲೋಷನ್ – ಈ ಎಲ್ಲ ಉತ್ಪನ್ನಗಳು ನಿಮ್ಮ ಜತೆ ಇರಲಿ. ಟೂರ್ ವೇಳೆ ಸಾಕಷ್ಟು ನೀರು ಕುಡಿಯಿರಿ. ಆರೋಗ್ಯಕರ ಸ್ನ್ಯಾಕ್ಸ್‍ಗಳನ್ನು ಪ್ಯಾಕ್ ಮಾಡಿಕೊಳ್ಳಿ. ನಿಮ್ಮ ಬಟ್ಟೆಗಳನ್ನು ಸ್ವಚ್ಚವಾಗಿಡಿ. ಸನ್ ಸ್ಕ್ರಿನ್ ಲೇಪಿಸಿಕೊಳ್ಳಿ, ಸದಾ ತಾಜಾತನದಿಂದ ಇರಬೇಕು

✦ಬೇಸಿಗೆ ಮತ್ತು ಸೌಂದರ್ಯ ಟಿಪ್ಸ್ :
ತೆಳು ಪದರ ಲೇಪಿಸಿಕೊಳ್ಳಿ ನಿಮ್ಮ ವದನ ಹೊಳೆಯುತ್ತದೆ. ಕನಿಷ್ಟ 15 ಎಸ್‍ಪಿಎಫ್‍ನೊಂದಿಗೆ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಿ. ಮಹಿಳೆಯರು ಗುಲಾಬಿ ವರ್ಣದ ಲಿಪ್‍ಸ್ಟಿಕ್ ಹಚ್ಚಿಕೊಳ್ಳುವುದು ಉತ್ತಮ.

✦ ಸೂರ್ಯನಿಂದ ರಕ್ಷಣೆ
ಸನ್ ಸ್ಕ್ರಿನ್ ಬಳಸಿ. ಗಡುವು ದಿನಾಂಕದ ಬಗ್ಗೆ ಎಚ್ಚರವಿರಲಿ. ಹೊರಗೆ ಬಿಸಿಲಿನಲ್ಲಿ ಹೋಗುವುದಕ್ಕೆ 20 ನಿಮಿಷಗಳ ಮೊದಲು ಮೊದಲ ಸನ್ ಸ್ಕ್ರಿನ್ ಲೇಪಿಸಿ ಹಾಗೂ ಬಿಸಿಲಿನಿಂದ ಒಳಗೆ ಹೋದ 20 ನಿಮಿಷಗಳ ಬಳಿಕ ಎರಡನೇ ಸನ್ ಸ್ಕ್ರಿನ್ ಲೇಪಿಸಿಕೊಳ್ಳಿ.ನೀವು ಬಿಸಿಲಿನಲ್ಲಿ ದೀರ್ಘ ಕಾಲ ಇರಬೇಕಾದ ಸಂದರ್ಭದಲ್ಲಿ ಸನ್ ಸ್ಕ್ರಿನ್‍ನನ್ನು ಅಗಾಗ ಲೇಪಿಸಬೇಕು.

ಈಜಿದ ನಂತರ ಅಥವಾ ನೀರಿನಲ್ಲಿರಬೇಕಾದ ಸಂದರ್ಭದಲ್ಲಿ ಸನ್ ಸ್ಕ್ರಿನ್‍ನನ್ನು ಮತ್ತೆ ಲೇಪಿಸಬೇಕು. ಬೆಳಿಗ್ಗೆ 5-7ರ ಅವಧಿಯಂತ ತಣ್ಣಗಿನ ಸಮಯದಲ್ಲಿ ಪರಿಶ್ರಮದ ವ್ಯಾಯಾಮ ಮಾಡಿ. ಹಾನಿಕಾರಕ ಆಲ್ಟ್ರಾವಯಲೇಟ್ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಸನ್ ಗ್ಲಾಸ್ ಧರಿಸಿ.ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಶಿಶುಗಳನ್ನು ಸೂರ್ಯನಿಂದ ದೂರ ಇಡಬೇಕು. ಮೋಡ ಮುಸುಕಿದ ವಾತಾವರಣದಲ್ಲೂ ಸೂರ್ಯನ ಕಿರಣಗಳು ಹಾನಿಕರವಾಗಿರುತ್ತದೆ.

✦ಬೇಸಿಗೆಯಲ್ಲಿ ಮೇಕಪ್ ಟಿಪ್ಸ್
ನೀವು ಕಣ್ಣಿಗೆ ಬಣ್ಣ ಹಚ್ಚುವವರಾಗಿದ್ದರೆ, ವಾಟರ್‍ಪ್ರೂಫ್ ಪ್ರಯತ್ನಿಸಿ. ಗಾಢವಾದ ಫೌಂಡೇಷನ್ ಲೋಷನ್ ಮತ್ತು ಕ್ರೀಮ್‍ಗಳಿಂತ ಮ್ಯಾಟಿ ಪೌಡರ್‍ನನ್ನು ಫೌಂಡೇಶನ್ ಆಗಿ ಬಳಸುವುದು ಉತ್ತಮ. ಏಕೆಂದರೆ ನೀವು ಸ್ವಲ್ಪ ಬೆವರಿದರೂ ಫೌಂಡೇಷನ್ ಲೋಷನ್ ಮತ್ತು ಕ್ರೀಮ್‍ಗಳು ನಿಮ್ಮ ಮುಖವನ್ನು ತೇಪೆ ಹಾಕಿದಂತೆ ಕಾಣುವಂತೆ ಮಾಡುತ್ತದೆ.ಬೇಸಿಗೆಯಲ್ಲಿ ತುಟಿಗಳ ರಕ್ಷಣೆಯೂ ಮುಖ್ಯ. ಹಾಗಾಗಿ ಲಿಪ್ ಗ್ಲೋಸ್ ಅಥವಾ ಲಿಪ್ ಬಾಮ್ ಲೇಪಿಸುವುದು ಉತ್ತಮ. ನಿಮ್ಮೊಂದಿಗೆ ಐ ಮೇಕಪ್ ರಿಮೂವರ್‍ನನ್ನು ಕೊಂಡ್ಯೊಯಲು ಮರೆಯದಿರಿ. ಇದರಿಂದ ವಾಟರ್ ಪ್ರೂಫ್ ಮೇಕಪ್‍ನ ನೈಸರ್ಗಿಕ ಸನ್ನಿವೇಶದ ಪರಿಣಾಮವಾಗಿ ಕಪ್ಪು ಕಲೆಗಳು ಆಗುವುದನ್ನು ತಪ್ಪಿಸಬಹುದಾಗಿದೆ.

ಬೇಸಿಗೆಯಲ್ಲಿ ಗುಲಾಬಿ ಬಣ್ಣ ಲಿಪ್‍ಸ್ಟಿಕ್ ಉತ್ತಮ. ಏಕೆಂದರೆ ಇದು ತುಂಬಾ ನೈಸರ್ಗಿಕವಾಗಿ ಕಾಣುತ್ತದೆ. ಮ್ಯಾಟಿ ಲಿಪ್‍ಸ್ಟಿಕ್‍ಗಿಂತ ಕ್ರೀಮಿ ಲಿಪ್‍ಸ್ಟಿಕ್‍ಗಳು ಉತ್ತಮ ಮತ್ತು ಇದು ದೀರ್ಘಕಾಲವೂ ಇರುತ್ತದೆ. ಬೇಸಿಗೆಯಲ್ಲಿ ಉಗುರುಗಳು ಚಿಕ್ಕದಾಗಿ ಚೊಕ್ಕವಾಗಿರಬೇಕು. ಗಾಢ ವರ್ಣಕ್ಕಿಂತ ತಿಳಿ ಬಣ್ಣದ ಉಗುರು ಬಣ್ಣ ಉತ್ತಮ. ಇದರಿಂದ ಪದೇ ಪದೇ ಉಗುರು ಬಣ್ಣ ಲೇಪಿಸುವುದು ಸುಲಭವಾಗುತ್ತದೆ.

ನೀವು ಬಳಸುವ ಫೌಂಡೇಷನ್‍ನನ್ನು ರೆಫ್ರಿಜರೇಟರ್‍ನಲ್ಲಿಡಿ. ಅದು ಮೃದುವಾದಾಗ, ನಿಮ್ಮ ಮುಖದ ಉಷ್ಣತೆ ಕರಗಿ ನಿಮ್ಮ ಚರ್ಮವನ್ನು ಸೇರುತ್ತದೆ. ಇದರಿಂದ ನೀವು ನಿಸರ್ಗದತ್ತವಾಗಿ ಉತ್ತಮ ಚರ್ಮ ಹೊಂದಿರುವಂತೆ ಕಾಣುತ್ತದೆ. ಬೇಸಿಗೆಯ ಸಂಜೆಗಳಲ್ಲಿ ಐ ಲೈನರ್ ಅಥವಾ ಕಾಜಲ್ ತುಂಬಾ ಚೆನ್ನಾಗಿ ಕಾಣುತ್ತದೆ. ನೀವು ಐ ಲೈನರ್‍ನನ್ನು ಕಣ್ಣುಗಳಿಗೆ ಲೇಪಿಸುವುದಕ್ಕೂ ಮುನ್ನ ಬೆಂಕಿ ಕಡ್ಡಿಯಿಂದ ನಿಮ್ಮ ಐ ಪೆನ್ಸಿಲ್‍ನ ತುದಿಯನ್ನು ಬಿಸಿ ಮಾಡಿದರೆ ಈ ಎಫೆಕ್ಟ್ ಪಡೆಯಬಹುದು. ನೀವು ಬೇಸಿಗೆಯಲ್ಲಿ ಬರಿಗಾಲಿನಲ್ಲಿ ಅಥವಾ ಮುಕ್ತ ಸ್ಯಾಂಡಲ್‍ನಲ್ಲಿ ನಡೆದಾಡುವುದಿದ್ದರೆ ನಿಮ್ಮ ಪಾದದ ಉಗುರುಗಳಿಗೆ ಗಾಢವಾದ ಮತ್ತು ಕಡು ವರ್ಣದ ನೈಲ್ ಪಾಲಿಶ್ ಉತ್ತಮ.

ನೀವು ಕೆಲವು ಮೂಲ ನಿಯಮಗಳೊಂದಿಗೆ ಸೂಕ್ತ ರೀತಿಯಲ್ಲಿ ಚರ್ಮದ ಆರೈಕೆ ಮಾಡಿದರೆ, ಸೂರ್ಯ ನಿಮಗೆ ಮಿತ್ರನಾಗುತ್ತಾನೆ ಹಾಗೂ ಬೇಸಿಗೆ ಉತ್ತಮ ಕಾಲವಾಗುತ್ತದೆ. ಮುಖ್ಯವಾಗಿ ಚರ್ಮ, ಕೂದಲು ಮತ್ತು ಕಣ್ಣುಗಳ ಬೇಸಿಗೆಯಲ್ಲಿ ಸುಲಭವಾಗಿ ಹಾನಿಗೆ ಸಿಲಕುವ ಸಾಧ್ಯತೆಗಳಿರುವುದರಿಂದ ಇವುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಬೇಸಿಗೆಯಲ್ಲಿ ನಿಮ್ಮ ದೇಹಕ್ಕೆ ನೀರಿನ ಅವಶ್ಯಕತೆ ಅಧಿಕವಾಗಿರುವುದರಿಂದ ಯೇಥೆಚ್ಚವಾಗಿ ನೀರು ಸೇವಿಸಬೇಕು. ಹೆಚ್ಚು ಕೊಬ್ಬು ಮತ್ತು ಪ್ರೊಟೀನ್‍ಗಳನ್ನು ತಪ್ಪಿಸಲು ನಿಮ್ಮ ಆಹಾರದಲ್ಲಿ ಅಗತ್ಯ ಪೋಷಕಾಂಶಗಳನ್ನು ಸೇರಿಸಿಕೊಳ್ಳಿ. ಸಿಟ್ರಸ್ ಹಣ್ಣು ಮತ್ತು ಹಣ್ಣಿನ ರಸಗಳ ರೂಪದಲ್ಲಿ ವಿಟಮಿನ್ ಸಿ ಸಾಕಷ್ಟು ಸೇವಿಸಿ. ಬೇಸಿಗೆಯಲ್ಲಿ ಚೆನ್ನಾಗಿ ಕಾಣಲು ಮತ್ತು ತಾಜಾತನದಿಂದ ಕೂಡಿರಲು ದಿನಕ್ಕೆ 8 ಗಂಟೆಗಳ ನಿದ್ದೆ ಸಹಕಾರಿ.


Share this with Friends

Related Post