ಮೈಸೂರು, ಫೆ.23: ಕಾವೇರಿ ನ್ಯಾಯ ಮಂಡಳಿ ತೀರ್ಪಿನಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಮಾನವ ಸರಪಳಿ ರಚಿಸಲಾಯಿತು.
ಕಾವೇರಿ ಕ್ರಿಯಾ ಸಮಿತಿಯು ಇಂದು ದೊಡ್ಡ ಗಡಿಯಾರ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಹೋರಾಟ ನಡೆಸಿತು.
ಪ್ರತಿ ಶುಕ್ರವಾರ ಪ್ರತಿಭಟನೆ ನಡೆಸಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಇಂದು ಧರಣಿ ಸತ್ಯಾಗ್ರಹ, ಸಹಿ ಸಂಗ್ರಹಣೆ ಹಾಗೂ ಮಾನವ ಸರಪಳಿಯನ್ನು ರಚಿಸಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ .ಜಯ ಪ್ರಕಾಶ್ ರವರು ಬಜೆಟ್ ಅಧಿವೇಶನದಲ್ಲಾದರೂ ಸರ್ವ ಪಕ್ಷಗಳ ಸಭೆ ಕರೆದು ಸುಗ್ರೀವಾಜ್ಞೆ ಹೊರಡಿಸುವ ಮೂಲಕ 5 ಟಿ ಎಂ ಸಿ ನೀರನ್ನು ಉಳಿಸಿಕೊಳ್ಳಬೇಕೆಂದು
ಆಗ್ರಹಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹೆಚ್ ಕೆ ರಾಮು, ಕನ್ನಡಾಂಬೆ ರಕ್ಷಣ ವೇದಿಕೆ ಅಧ್ಯಕ್ಷ ರಾಜಶೇಖರ್, ತೇಜೇಶ್ ಲೋಕೇಶ್ ಗೌಡ, ವರಕೂಡು ಕೃಷ್ಣೆಗೌಡ್ರು ಬೋಗಾದಿ ಸಿದ್ದೇಗೌಡ, ಶ್ರೀನಿವಾಸ, ಆಟೋ ಮಹಾದೇವ, ಹೊನ್ನೇಗೌಡ, ಶಿವಲಿಂಗಯ್ಯ ,ಸೋಮೇಗೌಡ, ಕುಮಾರ್ ಬಸಪ್ಪ, ಮಂಜುಳಾ, ಭಾಗ್ಯಮ್ಮ, ಪುಷ್ಪವತಿ, ಹನುಮಂತಯ್ಯ ,ಮಹಾದೇವ ಸ್ವಾಮಿ,ಬಾಲಕೃಷ್ಣ, ಭಾನುಪ್ರಕಾಶ್, ವಿಷ್ಣು, ಕೃಷ್ಣಪ್ಪ , ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.