Fri. Nov 1st, 2024

ಮಾದಕ ವಸ್ತುಗಳ ದುರುಪಯೋಗ, ಅಕ್ರಮ ಸಾಗಣೆ ಕುರಿತು ಮಾನವ‌ ಸರಪಳಿ

Share this with Friends

ಮೈಸೂರು, ಜೂ.26: ಸಾಂಸ್ಕೃತಿಕ ನಗರಿಯಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಕಳ್ಳ ಸಾಗಣೆ ವಿರೋಧಿ ಅಂತರರಾಷ್ಟ್ರೀಯ ದಿನ ಆಚರಿಸಿ ಜನರಿಗೆ ಅರಿವು ಮೂಡಿಸಲಾಯಿತು.

ಪುಷ್ಪಾಂಜಲಿ ಸೇವಾ ಸಂಸ್ಥೆ ಮತ್ತು ಅಗರ್ವಾಲ್ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ
ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಕಳ್ಳ ಸಾಗಣೆ ವಿರೋಧದ ಅಂತರರಾಷ್ಟ್ರೀಯ ದಿನ ಅಂಗವಾಗಿ ಎನ್ ಸಿ ಸಿ ಕೆಡೆಟ್ ಗಳು, ಎನ್ ಸಿ ಸಿ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾನವ ಸರಪಳಿಯಲ್ಲಿ ಭಾಗಿಯಾಗಿ ಪ್ರತಿಜ್ಞೆ ಸ್ವೀಕರಿಸಿದರು

ಪ್ರತಿಜ್ಞಾವಿಧಿಯನ್ನು ಅಂಕಣಕಾರರಾದ ಡಾಕ್ಟರ್ ವಿ ರಂಗನಾಥ್ ಅವರು ಬೋಧಿಸಿದರು.

ಇದಕ್ಕೂ ಮೊದಲು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಎನ್ ಕೆ ಲೋಕನಾಥ್ ಹಾಗೂ ಉಪ ಪೊಲೀಸ್ ಆಯುಕ್ತ ಮುತ್ತುರಾಜ್, N C B ವಲಯ ನಿರ್ದೇಶಕ ಎಸ್ ಕೆ ಮಿಶ್ರ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮ ಅಗರ್ವಾಲ್ ಸಂಸ್ಥೆಯ ಮುಖ್ಯಸ್ಥ ಡಾಕ್ಟರ್ ಎಸ್ ಕೆ ಮಿತ್ತಲ್ ಅವರ ನೇತೃತ್ವದಲ್ಲಿ ನಡೆಯಿತು.

ದಿವ್ಯ ಸಾನಿಧ್ಯವನ್ನು ಚೇತನ್ ಗಿರಿ ಮಹಾರಾಜ್ ಸ್ವಾಮೀಜಿ ವಹಿಸಿದ್ದರು.
ಎನ್ ಸಿ ಸಿ ಗ್ರೂಪ್ ಕಮಾಂಡರ್ ಕರ್ನಲ್ ರೋಹಿತ್ ಠಾಕೂರ್ , ಉಚ್ಚ ಶಿಕ್ಷಣಾಧಿಕಾರಿ ಅರುಣ್ ಕುಮಾರ್, ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮಂಜುನಾಥ್, ಜೀವ್ದಾರರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ದತ್ತಾತ್ರೇಯ ಸಿಂಧೆ, ನವೀನ ಗುಪ್ತ, ಹರಿ ಸಿಂಗ್ ಲಂಬ, ಅಜಯ್ ಶಾಸ್ತ್ರಿ ಮತ್ತಿತರ ಮುಖಂಡರುಗಳು ಭಾಗವಹಿಸಿದ್ದರು.


Share this with Friends

Related Post