Sat. Nov 2nd, 2024

ಮಾನವೀಯ ಮೌಲ್ಯಗಳ ಗಣಿ ಪುನೀತ್ : ಬಿ ಗಣೇಶ್

Share this with Friends

ಮೈಸೂರು, ಮಾ.30: ಕರುನಾಡು ಸೇವಾ ಸೇನೆ ವತಿಯಿಂದ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಯಿತು.

ರಾಜ್ಯಮಟ್ಟದ ಮೊದಲನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯನ್ನು ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕರುನಾಡು ಸೇವಾ ಸೇನೆ ಸಂಸ್ಥಾಪಕ ಅಧ್ಯಕ್ಷ ಬಿ. ಗಣೇಶ್ ಚಾಲನೆ ನೀಡಿದರು

ಈ ವೇಳೆ ಮಾತನಾಡಿದ ಅವರು, ಸರಳತೆ ಮತ್ತು ಪರೋಪ ಕಾರ ಗುಣಗಳನ್ನು ಅಳವಡಿಸಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿದ್ದ ಪುನೀತ್ ರಾಜ್‍ಕುಮಾರ್ ಮಾನವೀಯ ಮೌಲ್ಯಗಳ ಗಣಿ ಆಗಿದ್ದರು ಎಂದು ಹೇಳಿದರು.

ಪುನೀತ್ ಮರೆಯಾದ ನಂತರದ ದಿನಗಳಲ್ಲಿ ಅವರು ಮಾಡಿದ ಸಾಮಾಜಿಕ ಸೇವೆಯ ಬಗ್ಗೆ ಎಲ್ಲರಿಗೂ ತಿಳಿಯಿತು. ಅವರು ಬದುಕಿದ ರೀತಿ ಇಂದಿನ ಯುವಕರಿಗೆ ಮಾದರಿಯಾಗಿದೆ. ಅಪ್ಪು ಮರಣದ ನಂತರವೂ ಜೀವಂತವಾಗಿದ್ದಾರೆ. ಪ್ರಚಾರ ಇಲ್ಲದೆ ಸಾವಿರಾರು ಕುಟುಂಬಗಳ ನೋವಿಗೆ ಸ್ಪಂದಿಸುತ್ತಿದ್ದ ಅವರ ಗುಣ ಚಿರಸ್ಮರಣೀಯ ಎಂದು ಗಣೇಶ್ ತಿಳಿಸಿದರು.

ವಿವಿಧ ರಾಜ್ಯದಿಂದ 16 ತಂಡ ಭಾಗವಹಿಸಿದ್ದು, ಭಾನುವಾರ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಗುವುದು.

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ, ಕರುನಾಡು ಸೇವಾ ಸೇನೆಯ ಕಾರ್ಯದರ್ಶಿ ಕೆ ಮುರಳಿ, ಸಂಘಟನಾ ಕಾರ್ಯದರ್ಶಿ ಎನ್ ನಂದೀಶ್, ವಿ ಕುಮಾರಸ್ವಾಮಿ, ನಗರ ಕಾರ್ಯದರ್ಶಿ ಅಂ ಸಿ ಚೇತನ್, ಹೇಮಂತ್ ದಿಲೀಪ್, ಕುಮಾರ್, ಅನಂತನಾಗ್ , ಸಾಧಿಕ್, ನಿಶಾದ್, ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.


Share this with Friends

Related Post