Mon. Dec 23rd, 2024

ಶಿವಮೊಗ್ಗ‌ದಿಂದ ಪಕ್ಷೇತರ‌ನಾಗಿ ಸ್ಪರ್ಧಿಸುತ್ತೇನೆ:ಈಶ್ವರಪ್ಪ ಕಡಕ್ ನುಡಿ

Share this with Friends

ಶಿವಮೊಗ್ಗ,ಮಾ.15: ಶಿವಮೊಗ್ಗ‌ ಲೋಕಸಭಾ ಕ್ಷೇತ್ರದಿಂದ ನಾನು ಬಿ. ವೈ. ರಾಘವೇಂದ್ರ ವಿರುದ್ಧ ಸ್ಪರ್ಧಿಸುವುದು ಖಂಡಿತ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿಂದು ತಮ್ಮ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಂತರ ಮಾತನಾಡಿದ ಅವರು ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು.

ಮಾತಿನುದ್ದಕ್ಕೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಪತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಗುಡುಗಿದರು.

ನಾನು ಕಳೆದ ಒಂದು ವರ್ಷದಿಂದಲೂ ನನ್ನ ಪುತ್ರನಿಗೆ ಶಿವಮೊಗ್ಗದಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವಂತೆ ಮನವಿ ಮಾಡುತ್ತಲೇ ಬಂದೆ ಆದರೆ ಕೊನೆಗೂ ಬಿ.ಎಸ್ ಯಡಿಯೂರಪ್ಪ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯುವುದಿಲ್ಲ, ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಗೆದ್ದೇ ತೀರುತ್ತೇನೆ, ನನಗೆ ಬೆಂಬಲಿಗರ ಮತ್ತು ನೊಂದ ನನ್ನ ಕಾರ್ಯಕರ್ತರ ಆಶೀರ್ವಾದವಿದೆ ಹಾಗಾಗಿ ನಾನು ಗೆಲ್ಲುವುದು ಖಚಿತ. ನಾನು ಗೆದ್ದ ನಂತರ ಬಿಜೆಪಿಯವರು ನನ್ನನ್ನು ಮತ್ತೆ ಪಕ್ಷಕ್ಕೆ ಕರೆಯುತ್ತಾರೆ ಎಂದು‌ ಈಶ್ವರಪ್ಪ ವ್ಯಂಗ್ಯವಾಡಿದರು.


Share this with Friends

Related Post