Mon. Dec 23rd, 2024

ಕೆಟ್ಟ ಚಟಗಳಿಗೆ ದಾಸರಾದರೆ ನಮ್ಮ ಸಾವನ್ನು ನಾವೇ ತಂದುಕೊಂಡಂತೆ:ಇನ್ ಸ್ಪೆಕ್ಟರ್ ಬಸವರಾಜ್

Share this with Friends

ನಂಜನಗೂಡು,ಜೂ.26: ಯುವಜನತೆ ಇಂದಿನ ವೇಗದ ಬದುಕಿನಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ‌ ಇಡಬೇಕು ಎಂದು
ನಂಜನಗೂಡಿನ ಪೊಲೀಸ್ ಇನ್ಸ್ಪೆಕ್ಟರ್‌ ಬಸವರಾಜ್ ಸಲಹೆ ನೀಡಿದರು.

ಒಂದು ವೇಳೆ ಕೆಟ್ಟ ಚಟಗಳಿಗೆ ಬಲಿಯಾದರೆ ನಮ್ಮ ಸಾವನ್ನು ನಾವೇ ತಂದು ಕೊಂಡಂತಾಗುತ್ತದೆ ಹಾಗಾಗಿ ಜಾಗೃತರಾಗಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ವಿರೋಧಿ ದಿನದ ಅಂಗವಾಗಿ ಪೋಲಿಸ್ ಇಲಾಖೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿಂದು ನಂಜನಗೂಡು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಇನ್ಸ್ಪೆಪೆಕ್ಟರ್ ಮಾತನಾಡಿ ಮಾದಕ ವಸ್ತು ಸೇವನೆಯಿಂದ ಆಗುವ ಅನಾಹುತಗಳನ್ನು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಲಯನ್ ಸಿ.ಆರ್ ದಿನೇಶ್ ಮಾತನಾಡಿ ವಿದ್ಯಾರ್ಥಿಗಳು ಒಳ್ಳೆಯ ಚಿಂತನೆ , ಒಳ್ಳೆಯ ಆಲೋಚನೆ ,ಒಳ್ಳೆಯ ಮನೋಭಾವನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮುಂದೆ ಸಾರ್ಥಕ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಉಪನ್ಯಾಸಕ ರಂಗಸ್ವಾಮಿಯವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ವಿದ್ಯಾರ್ಥಿಗಳು ಇಂತಹ ಪ್ರತಿಜ್ಞೆ ಮಾಡುವ ಮೂಲಕ ತಮ್ಮ ಮನಸ್ಥಿತಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ರಾಜ್ಯಶಾಸ್ತ್ರ ಉಪನ್ಯಾಸಕ ಸ್ವಾಮಿ ಗೌಡ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸಂಚಾರಿ ಇನ್ಸ್ಪೆಕ್ಟರ್ ಶರೀಫ್, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಎನ್ .ನಾಗರಾಜು, ಉಪನ್ಯಾಸಕರಾದ ರೂಪ, ಮಾಲತಿ , ಮೀನಾ, ಸುಮಾ, ದಿನೇಶ್ , ನಾಗರಾಜ ರೆಡ್ಡಿ
ವಸಂತ ಕುಮಾರಿ ,ಬಸವಣ್ಣ, ಹರೀಶ್ ,ಮಲ್ಲಿಕಾರ್ಜುನ್, ಯಶವಂತ್ , ಮಹದೇವ ಸ್ವಾಮಿ,ಲಿಂಗಣ್ಣ ಮತ್ತಿತರರು ಉಪಸಿತರಿದ್ದರು.


Share this with Friends

Related Post