Sat. Nov 2nd, 2024

ಬೆಳಗ್ಗೆ 9.15ರೊಳಗೆ ಕಚೇರಿಗೆ ಬರದಿದ್ದರೇ ಅರ್ಧ ದಿನದ ವೇತನ ಕಟ್

Share this with Friends

ನವದೆಹಲಿ,ಜೂ.22:ಪ್ರತಿದಿನ ಬೆಳಗ್ಗೆ 9.15ರೊಳಗೆ ಕಚೇರಿಗೆ ಬರದಿದ್ದರೇ ಅರ್ಧ ದಿನದ ವೇತನ ಕಟ್ ಎಂದು ಕೇಂದ್ರ ಸರ್ಕಾರಿ
ನೌಕರರಿಗೆ ಎಚ್ಚರಿಕೆ ನೀಡಲಾಗಿದೆ.

ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸದ ಅಧಿಕಾರಿಗಳ ವಿರುದ್ಧ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಬಿಸಿ ಮುಟ್ಟಿಸಿದೆ.

15 ನಿಮಿಷಗಳ ವಿಳಂಬವಾದರೆ ಕ್ಷಮಿಸಬಹುದು ಆದರೆ ಗಂಟೆಗಟ್ಟಲೆ ತಡವಾದರೆ ಕ್ರಮ ಇರುತ್ತದೆ, ದೇಶಾದ್ಯಂತ ಕೇಂದ್ರ ಸರ್ಕಾರದ ಉದ್ಯೋಗಿಗಳು ಬೆಳಗ್ಗೆ 9.15ಕ್ಕೆ ಕಚೇರಿಗೆ ಹಾಜರಾಗಲೇಬೇಕು,ಜತೆಗೆ ಹಾಜರಾತಿಯನ್ನು ದಾಖಲು ಮಾಡಲೇಬೆಕೆಂದು ಸುತ್ತೊಲೆ ಹೊರಡಿಸಲಾಗಿದೆ.

ಕೇಂದ್ರ ಸರ್ಕಾರಿ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 5.30 ಗಂಟೆ ವರೆಗೆ ತೆರೆದಿರುತ್ತವೆ. ಆದರೆ ಕಿರಿಯ ಹಂತದ ಉದ್ಯೋಗಿಗಳು ತಡವಾಗಿ ಬರುವುದು ಮತ್ತು ಬೇಗನೆ ಹೊರಟುಬಿಡುತ್ತಾರೆ.

ಇದರಿಂದ ಸಾರ್ವಜನಿಕ ಕೆಲಸಗಳಿಗೆ ಹಾಗೂ ಜನರಿಗೆ ಅನಾನುಕೂಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ.

ಕೊವೀಡ್ ಬಳಿಕ ಕೇಂದ್ರ ಸರ್ಕಾರದ ನೌಕರರು ಬಯೋಮೆಟ್ರಿಕ್ ಬಳಕೆ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲರೂ ಬಯೋ ಮೆಟ್ರಿಕ್ ಮೂಲಕವೇ ಹಾಜರಾತಿ ದಾಖಲಿಸಬೇಕು ಎಂದು ಸೂಚಿಸಲಾಗಿದೆ.

ಬೆಳಗ್ಗೆ 9.15 ರೊಳಗೆ ಬಾರದಿದ್ದಲ್ಲಿ ಅರ್ಧ ದಿನದ ವೇತನ ಕಡಿತಗೊಳಿಸಲಾಗುವುದು ಎಂದು ಸಹ ಎಚ್ಚರಿಕೆ ನೀಡಿದೆ.

ಅನಿವಾರ್ಯ ಕಾರಣಗಳಿಂದ ಯಾವುದೇ ಉದ್ಯೋಗಿಗೆ ನಿರ್ದಿಷ್ಟ ದಿನದಂದು ಕಚೇರಿಗೆ ಹಾಜರಾಗಲು ಸಾಧ್ಯವಾಗದಿದ್ದರೆ ಅದನ್ನು ಮುಂಚಿತವಾಗಿ ತಿಳಿಸಬೇಕು ಮತ್ತು ಸಾಂದರ್ಭಿಕ ರಜೆಗೆ ಅರ್ಜಿ ಸಲ್ಲಿಸಬೇಕು ಎಂದು ತಾಕೀತು ಮಾಡಲಾಗಿದೆ.

2014 ರಲ್ಲಿ ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನಿಯಾದ ಬಳಿಕ ಕಚೇರಿ ಸಮಯವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಪ್ರಯತ್ನಿಸ ಲಾಗಿತ್ತು. ಆಗ ಇದನ್ನು ನೌಕರರು ವಿರೋಧಿಸಿದ್ದರು. ಈಗ ಮತ್ತೆ ಸಮಯ ಕಡ್ಡಾಯ ಮಾಡಲಾಗಿದೆ ಈಗೇನಂತಾರೊ ಕೇಂದ್ರ ಸರ್ಕಾರಿ ನೌಕರರು ನೋಡಬೇಕು.


Share this with Friends

Related Post