Tue. Dec 24th, 2024

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ದಂಧೆ: ರಾಜಾಸ್ಥಾನ ಮೂಲದ ನಾಲ್ವರ ಬಂಧನ

Share this with Friends

Gasಗೃಹಬಳಕೆ ಸಿಲಿಂಡರ್ ಗಳಿಂದ ವಾಣಿಜ್ಯ ಸಿಲಿಂಡರ್ ಗಳಿಗೆ ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದ ದಂಧೆ
ಯನ್ನು ವಿಜಯನಗರ ಪೋಲೀಸರು ಬಯಲಿಗೆಳೆದಿದ್ದಾರೆ.

ಅಕ್ರಮ ರೀಫಿಲ್ಲಿಂಗ್ ಮಾಡುತ್ತಿದ್ದ ಜಾಗದ ಮೇಲೆ ವಿಜಯನಗರ ಠಾಣೆ ಪೊಲೀಸರು ದಾಳಿ ನಡೆಸಿ ರಾಜಾಸ್ಥಾನ ಮೂಲದ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಿಂದ ವಿವಿದ ಗ್ಯಾಸ್ ಕಂಪನಿಯ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ 95 ಸಿಲಿಂಡರ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.

ಅಲ್ಲದೆ ಗ್ಯಾಸ್ ರೀಫಿಲ್ಲಿಂಗ್ ಮಾಡಲು ಬಳಸುತ್ತಿದ್ದ 12 ರಾಡ್ ಗಳು ಮತ್ತು ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ರಾಜಾಸ್ಥಾನದ ಸುನಿಲ್ ಕುಮಾರ್,ದಿನೇಶ್,ಕೈಲಾಸ್,ಸುಭಾಷ್ ಭಿಷ್ಣೋಯಿ ಬಂಧಿತ ಆರೋಪಿಗಳು,ಇವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಆರೋಪಿಗಳು ಮೈಸೂರಿನ ವಿಜಯನಗರ ನಾಲ್ಕನೇ ಹಂತದ ಖಾಲಿ ನಿವೇಶನವೊಂದರಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದರು.

ಸಂಭಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದರು. ವಿಜಯನಗರ ಠಾಣೆ ಪೊಲೀಸರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳನ್ನ ಕರೆಸಿ ಪರಿಶೀಲನೆ ನಡೆಸಿ ಅಕ್ರಮವನ್ನ ಧೃಢಪಡಿಸಿಕೊಂಡರು.

ಹೆಚ್.ಪಿ,ಭಾರತ್ ಹಾಗೂ ಇಂಡೇನ್ ಕಂಪನಿಯ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ 95 ಸಿಲಿಂಡರ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.


Share this with Friends

Related Post