ಮೈಸೂರು,ಜು.13: ಅಕ್ರಮವಾಗಿ ಮೈನಿಂಗ್ ನಡೆಸುತ್ತಿದ್ದ ಆರೋಪದ ಹಿನ್ನಲೆಯಲ್ಲಿ
ಹುಣಸೂರು ತಾಲೂಕಿನ ಕಾಳೇಗೌಡನ ಕೊಪ್ಪಲು ಗ್ರಾಮಕ್ಕೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಎಚ್ಚರಿಕೆ ನೀಡಿ ಬಂದಿದ್ದಾರೆ.
ತಾಲೂಕು ಅಧಿಕಾರಿಗಳು ಪರಿಶೀಲನೆ ನಡೆಸಿ ಹಿಟಾಚಿಯೊಂದನ್ನು ವಶಕ್ಕೆ ಪಡೆದಿದ್ದಾರೆ.
ಹುಣಸೂರು ತಾಲೂಕಿನ ಕಾಳೇಗೌಡನ ಕೊಪ್ಪಲು ಸರ್ವೆ ನಂಬರ್ 50 ರಲ್ಲಿ ಅಕ್ರಮವಾಗಿ ಮೈನಿಂಗ್ ನಡೆಯುತ್ತಿದ್ದ ಬಗ್ಗೆ ಸ್ಥಳೀಯರು ತಾಲೂಕು ಕಚೇರಿಗೆ ಮಾಹಿತಿ ನೀಡಿದ್ದರು.
ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಅಕ್ರಮ ಎಂದು ಖಚಿತಪಡಿಸಿ ಮೈನಿಂಗ್ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದರು.
ಆದರೂ ಅಧಿಕಾರಿಗಳ ಸೂಚನೆಗೆ ಕ್ಯಾರೇ ಅನ್ನದೆ ಮೈನಿಂಗ್ ಮುಂದುವರಿಸಿದ್ದರು
ಹಾಗಾಗಿ ತಾಲೂಕು ಕಚೇರಿಯ
ವಿಎ ಗಳಾದ ಲಲಿತ, ನಾಗೇಶ್ ಹಾಗೂ ಗ್ರಾಮ ಸಹಾಯಕ ಗಿರೀಶ್ ಭೇಟಿ ನೀಡಿ ಹಿಟಾಚಿ ವಾಹನ ಜಪ್ತಿ ಮಾಡಿ ಎಚ್ಚರಿಕೆ ಕೊಟ್ಟಿದ್ದು ಮತ್ತೆ ಮುಂದುವರಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.