Fri. Nov 1st, 2024

ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿ.ಕೆ.ಶಿವಕುಮಾರ್ ಗೆ ಬಿಗ್ ರಿಲೀಫ್

Share this with Friends

ಬೆಂಗಳೂರು, ಮಾ.5: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ 120B ಅಡಿ ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದೆ.

ಅಕ್ರಮ ಹಣ ಸಾಗಣೆ ಕೇಸ್‌ನಲ್ಲಿ ಇಡಿ ದಾಖಲಿಸಿದ್ದ ಪ್ರಕರಣವನ್ನು ವಜಾ ಮಾಡಿ ಸುಪ್ರೀಂ ಕೋರ್ಟ್​ ಆದೇಶ ನೀಡಿದೆ.

2017ರಲ್ಲಿ ದೆಹಲಿಯ ಫ್ಲಾಟ್‌ನಲ್ಲಿ ಸಿಕ್ಕಿದ್ದ ಹಣದ ಸಂಬಂಧ (PMLA ಅಡಿಯಲ್ಲಿ) ಕೇಸು ದಾಖಲಿಸಲಾಗಿತ್ತು. ಆಗಸ್ಟ್ 2017 ರಲ್ಲಿ ದೆಹಲಿಯ ಫ್ಲಾಟ್ ಗಳಲ್ಲಿ ಕತೆ ಕಂತೆ ಹಣ ಸಿಕ್ಕಿತ್ತು. ಪ್ರಕರಣದಲ್ಲಿ ಇಡಿ ಸಮನ್ಸ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿತ್ತು. 2019 ರ ಆದೇಶದ ವಿರುದ್ಧ ಡಿ.ಕೆ ಶಿವಕುಮಾರ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಸಿದ ಡಿ.ಕೆ.ಶಿವಕುಮಾರ್,ನಾನು ಇಲ್ಲಿಂದಲೇ ಸುಪ್ರೀಂ‌ ಕೋರ್ಟ್‌ ನ್ಯಾಯಾಧೀಶರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಂತಸವಾಗಿದೆ,ಆದರೆ
ಮತ್ತೆ ಮೇಲ್ಮನವಿ ಸಲ್ಲಿಸುತ್ತಾರೆಂಬ ಮಾಹಿತಿ ಇದೆ,ನಾನು ಯಾವುದಕ್ಕೂ ಭಯ ಪಡುವುದಿಲ್ಲ,ಎಲ್ಲವನ್ನೂ ಎದುರಿಸುತ್ತೇನೆ ಜೈಲಿಗೂ ಹಾಕಲಿ ದೇವರಿದ್ದಾನೆ, ಸತ್ಯಕ್ಕೆ ಜಯವಿದೆ ಎಂದು ತಿಳಿಸಿದರು.


Share this with Friends

Related Post