Mon. Dec 23rd, 2024

ಕಾಂಗ್ರೆಸ್‌ ನ ಭ್ರಮೆ ಇಳಿಯುತ್ತಿದೆ: ವಿಜಯೇಂದ್ರ ಟೀಕೆ

Share this with Friends

ಬೆಂಗಳೂರು,ಮಾ.31: ಬಿಜೆಪಿ ಚುನಾವಣಾ ಆಯೋಗ ಮತ್ತು ಕಾನೂನು ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಭಾನುವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷರು ಬಿ.ವೈ. ವಿಜಯೇಂದ್ರ,ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕರಾದ ವಸಂತ್ ಕುಮಾರ್, ಪಕ್ಷದ ಪ್ರಮುಖರಾದ ದತ್ತಗುರು ಹೆಗ್ಡೆ ಮತ್ತಿತರರು ಪಾಲ್ಗೊಂಡಿದ್ದರು.

ಈ ವೇಳೆ ಬಿ.ವೈ.ವಿಜಯೇಂದ್ರ ಮಾತನಾಡಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಧಿಕಾರದ ಮದವನ್ನು ತಲೆಗೇರಿಸಿಕೊಂಡಿತ್ತು,ಈಗ ಅದು ಇಳಿಯಲಾರಂಭಿಸಿದೆ‌ ಎಂದು ವ್ಯಂಗ್ಯವಾಡಿದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಹದಿನೈದು ಸಚಿವರನ್ನು‌ ಲೋಕಸಭಾ‌ ಚುನಾವಣೆಗೆ ಇಳಿಸಲು ನಿರ್ಧರುಸಿದ್ದರು‌,ಆದರೆ ಯಾವೊಬ್ಬ ಸಚಿವರೂ ಇದಕ್ಕೆ ಒಪ್ಪಿಲ್ಲ,ಏಕೆಂದರೆ ಮೋದಿಯವರ ಅಲೆಯಲ್ಲಿ‌ ತಾವು ಕೊಚ್ಚಿಹೋಗುತ್ತೇವೆಂಬ ಅಂಜಿಕೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಸದ್ಯ ಸಂಗತಿಗಳು ಗೊತ್ತಾಗುತ್ತಿದೆ, ಈಗ ಜ್ಞಾನೋದಯವಾಗಿದೆ ಎಂದು ಟೀಕಿಸಿದರು

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾನೂನು ಘಟಕ ಅತ್ಯಂತ‌ ಹೆಚ್ಚು ಚುರುಕಾಗಿ ಕಾರ್ಯ ನಿರ್ವಹಿಸಬೇಕೆಂದು‌ ವಿಜಯೇಂದ್ರ‌ ಸೂಚಿಸಿದರು. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬರು ಶ್ರಮಿಸಬೇಕೆಂದೂ ಮೋದಿಯವರ ಕೈಯನ್ನು ಬಲಪಡಿಸಬೇಕೆಂದು ವಿಜಯೇಂದ್ರ ಮನವಿ ಮಾಡಿದರು.


Share this with Friends

Related Post