Mon. Apr 21st, 2025

ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ನೀರಿಲ್ಲದೆ ರೋಗಿಗಳ ಪರದಾಟ

Share this with Friends

ಮೈಸೂರು, ಮೇ.15: ಜಿಲ್ಲೆಯ
ಎಚ್.ಡಿ.ಕೋಟೆ ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಹನಿ ನೀರಿಗಾಗಿ ರೋಗಿಗಳು ಪರದಾಡುವಂತಾಗಿದೆ.

ಡಯಾಲಿಸಿಸ್ ಗಾಗಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ನೀರಿದ ಕೊರತೆ ಎದುರಾದುದರಿಂದ ರೋಗಿಗಳು ವಾಪಸಾಗಿದ್ದಾರೆ.

ಇಷ್ಟು‌ ಕೆಟ್ಟ ಪರಿಸ್ಥಿತಿ ಈ ಆಸ್ಪತ್ರೆಯಲ್ಲಿದೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ನೀರಿಲ್ಲ ಎಂದು ಹೇಳಿ ಡಯಾಲಿಸಿಸ್‌ ಮಾಡದೆ ರೋಗಿಗಳನ್ನು ಸಿಬ್ಬಂದಿ ಮನೆಗೆ ಕಳಿಸಿದ್ದಾರೆ.

ಈ ಬಗ್ಗೆ ಕೇಳಿದರೆ ವಿದ್ಯುತ್‌ ವ್ಯತ್ಯಯದಿಂದ ನೀರಿಗೆ ತೊಂದರೆಯಾಗಿದೆ ಎಂದು ಸಿಬ್ಬಂದಿ ಸಬೂಬು ಹೇಳುತ್ತಾರೆ.

ಆದರೆ ಇಡೀ ಊರಿಗೇ ವಿದ್ಯುತ್ ಕಡಿತವಾಗುತ್ತದೆ,ವಿದ್ಯುತ್ ಇದ್ದಾಗ ನೀರಿನ ಸರಬರಾಜಿಗೆ ಕ್ರಮವಹಿಸದ ಕಾರಣ ನೀರಿಗೆ ತೊಂದರೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಇದೆಲ್ಲಾ ಏನೇ ಇದ್ದರೂ ಸಕಾಲದಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗದೆ ಹೊಟ್ಟೆ ಉಬ್ಬಸ, ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ಮಾತ್ರ ಅತ್ಯಂತ ತೊಂದರೆಗೀಡಾಗಿದೆ.ಹಾಗಾಗಿ ಈ ಸರ್ಕಾರಿ ಆಸ್ಪತ್ರೆಗೆ ಮೇಜರ್ ಸರ್ಜರಿ ಬೇಕಿದೆ.


Share this with Friends

Related Post