Thu. Jan 2nd, 2025

ನೀಟ್ ನಲ್ಲಿ ರ್‍ಯಾಂಕ್:ಉತ್ಸವ್ ಗೆ ಆಶೀರ್ವದಿಸಿದ ಬಸವಯೋಗಿಪ್ರಭುಗಳು

Share this with Friends

ತ.‌ನರಸೀಪುರ,ಜೂ.14:

ನೀಟ್ ಪರೀಕ್ಷೆಯಲ್ಲಿ 710 ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ 533 ನೇ ರ್‍ಯಾಂಕ್ ಪಡೆದ ಉತ್ಸವ್ ಆರ್ ಅವರನ್ನು
ನರಸಿಂಹರಾಜಪುರ ಬಸವ ಕೇಂದ್ರದ ಶ್ರೀ ಬಸವಯೋಗಿಪ್ರಭುಗಳು ಅಭಿನಂಧಿಸಿದ್ದಾರೆ.

ಉತ್ಸವ್ ಅವರು ಮಂಗಳೂರಿನ
ಎಕ್ಸ್ ಫರ್ಟ್ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಈ ಸಾಧನೆ ಮಾಡಿದ್ದಾರೆ.

ಉತ್ಸವ್ ಆರ್ .ಸಾಧನೆಗೆ ನರಸಿಂಹರಾಜಪುರ ಬಸವ ಕೇಂದ್ರದ ಶ್ರೀ ಬಸವಯೋಗಿಪ್ರಭುಗಳು ಹರ್ಷ ವ್ಯಕ್ತಪಡಿಸಿ ತಿ.ನರಸೀಪುರದ ವಿವೇಕಾನಂದ ನಗರದಲ್ಲಿ
ರುವ ಉತ್ಸವ್ ಮನೆಗೆ ಆಗಮಿಸಿ ಅಭಿನಂದನೆಗಳನ್ನು ಸಲ್ಲಿಸಿ ಆಶೀರ್ವದಿಸಿದರು.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಕಂದಳ್ಳಿ ಹೈಸ್ಕೂಲ್ ಶಿಕ್ಷಕರಾದ ರಾಜೇಶ್ ಬಿ ಮತ್ತು ಕೆಇಬಿ ಸೀನಿಯರ್ ಅಸಿಸ್ಟೆಂಟ್ ಕವಿತಾ ಎಚ್. ಜಿ ದಂಪತಿಗಳ ಪುತ್ರನಾದ ಉತ್ಸವ್ ಆರ್ ಇಡೀ ನಾಡು ಮೆಚ್ಚುವ ಸಾಧನೆ ಮಾಡಿದ್ದಾರೆ ಎಂದು ಬಸವಯೋಗಿಪ್ರಭುಗಳು ಮೆಚ್ಚುಗೆ ಪಟ್ಟರು.

ಈ ವೇಳೆ ಮೈಸೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿಕ್ಕಹಳ್ಳಿ ದೇವರಾಜು , ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ತುಂಬಲ ಬಸವಣ್ಣ ,ಗುರುಸಿದ್ದಮ್ಮ,
ಮಂಜುನಾಥ್,ಚೌಹಳ್ಳಿ ನಿಂಗರಾಜಪ್ಪ ಗೀತಾ ಉಪಸ್ಥಿತರಿದ್ದರು.


Share this with Friends

Related Post