Mon. Dec 23rd, 2024

ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಹನ ತಪಾಸಣೆ‌ ಜೋರು

Share this with Friends

ಬೆಂಗಳೂರು, ಮಾ.21: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಹನ ತಪಾಸಣೆ ತೀವ್ರವಾಗಿ ನಡೆದಿದೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಳ್ಳಾರಿ ರಸ್ತೆಯಲ್ಲಿರುವ ವಿಂಡ್ಸರ್ ಮ್ಯಾನರ್ ಬ್ರಿಜ್ ಬಳಿ ಇಂದು ವಾಹನಗಳ ತೀವ್ರ ತಪಾಸಣೆ ಮಾಡಲಾಯಿತು.

ಪೊಲೀಸರು ಹಾಗೂ ಚುನಾವಣೆ ಹಿನ್ನೆಲೆಯಲ್ಲಿ ನೇಮಕಗೊಂಡಿರುವ ಸ್ಕ್ವಾಡ್‌ ಸಿಬ್ಬಂದಿ ವಾಹನ ತಪಾಸಣೆ ನಡೆಸಿದರು.

ಸೇತುವೆ ಬಳಿ ಸಾಗುತ್ತಿದ್ದ ಕಾರು,ಮೆಟಡೋರ್,ಆಟೋ‌ ಹೀಗೆ ಪ್ರತೀ ವಾಹನವನ್ನು ಕೂಲಂಕುಶವಾಗಿ ಪರಿಶೀಲಿಸಿದರು.

ಅನುಮಾನಾಸ್ಪದವಾಗಿ ಕಂಡು ಬಂದದ್ದನ್ನುಉಟ್ಟುಗೋಲು ಹಾಕಿಕೊಂಡರು.


Share this with Friends

Related Post