Mon. Dec 23rd, 2024

ವಿಶ್ವ ಕಪ್ ಪಂದ್ಯದಲ್ಲಿ ಭಾರತ ಗೆಲುವು:ಅಭಿಮಾನಿಗಳ ಸಂಭ್ರಮ

Share this with Friends

ಮೈಸೂರು, ಜೂ.30: 2024ರ ವಿಶ್ವ ಕಪ್ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾದ ವಿರುದ್ಧ ಜಯಬೇರಿ ಸಾದಿಸಿದ ಹಿನ್ನಲೆ ಯಲ್ಲಿ
ಮೈಸೂರಿನಲ್ಲಿ ಅಭಿಮಾನಿಗಳ ಸಂಭ್ರಮ ಹೇಳತೀರದಾಗಿತ್ತು.

ನಿನ್ನೆ ಮಧ್ಯರಾತ್ರಿಯಿಂದ ಹಿಡಿದು ಇಂದಿನವರೆಗೂ ಕ್ರಿಕೆಟ್ ಪ್ರೇಮಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ಕುಣಿದು ಕುಪ್ಪಳಿಸಿದರು.

ನಂತರ ಭಾರತ ದ್ವಜವನ್ನು ಹಿಡಿದು ದ್ವಿಚಕ್ರವಾಹನದ ಮೂಲಕ ಮುಖ್ಯ ರಸ್ತೆಗಳಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ ಪರ ಘೋಷಣೆ ಕೂಗಿ ಜಿತೇಗಾ ಭೈ ಜಿತೇಗಾ ಭಾರತ್ ಟೀಂ ಜೀತೇಗಾ ಎಂಬ ಘೋಷಣೆ ಕೂಗಿ ಸಂತಸ‌ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಕ್ರಂ ಅಯ್ಯಂಗಾರ್,ಕಿರಣ್, ಸುದೀಂದ್ರ, ಬೆಲ್ಲ ರಾಜಣ್ಣ ಮಂಜುನಾಥ್,ಸಚಿನ್ ನಾಯಕ್ ಸೇರಿದಂತೆ ಅಪಾರ ಅಭಿಮಾನಿಗಳು ಹಾಜರಿದ್ದರು.


Share this with Friends

Related Post