Wed. Jan 1st, 2025

ಕಾವೇರಿ ನೀರಿನ ವಿಚಾರದಲ್ಲಿ ನಾಡಿಗೆ ಅನ್ಯಾಯ:ಸಹಿ ಸಂಗ್ರಹ ಮುಂದುವರಿಕೆ

Share this with Friends

ಮೈಸೂರು, ಏ.12: ಕಾವೇರಿ ಕ್ರಿಯಾಸಮಿತಿ ಧರಣಿ ಸತ್ಯಾಗ್ರಹ ಜೀವಂತವಾಗಿಡಲು ವಾರಕ್ಕೆ ಒಂದು ದಿನ ಧರಣಿ ಸತ್ಯಾಗ್ರಹ ಹಾಗೂ ಸಹಿ ಸಂಗ್ರಹ ಕಾರ್ಯವನ್ನು ಟೌನ್ ಹಾಲ್ ಮುಂದೆ ಇಂದೂ ಕೂಡಾ ನಡೆಸಿತು.

ಸಾವಿರಾರು ಮಂದಿಗೆ ಕಾವೇರಿ ನೀರಿನ ವಿಚಾರವಾಗಿ ನಮ್ಮ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ತಿಳಿ ಹೇಳಿ ಸಹಿ ಸಂಗ್ರಹಿಸಲಾಯಿತು.

ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯ ಪ್ರಕಾಶ್ ಮಾತನಾಡಿ,ಅಲ್ಲಿನ ಜಲಾಶಯಗಳಲ್ಲಿ ಅಷ್ಟೊಂದು ನೀರಿದ್ದರೂ ಕಾವೇರಿ ನ್ಯಾಯ ಮಂಡಳಿಗೆ ನೀರಿಗಾಗಿ ತಮಿಳುನಾಡು ಪಟ್ಟು ಹಿಡಿದಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು.

ವರುಣ ದೇವ ನಲ್ಲಿ ಅದಷ್ಟೂ ಬೇಗ ಮಳೆ ಸುರಿಸಲಿ ಎಂದು ಪ್ರಾರ್ಥಿಸೋಣ ಎಂದು ಕರೆ ನೀಡಿದ ಅವರು,ಕೂಡಲೇ ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು,ನಮ್ಮ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರವಾಗಿ ಶಾಶ್ವತವಾದ ಪರಿಹಾರವನ್ನು ನೀಡಬೇಕು ಅಲ್ಲಿಯ ತನಕ ನಮ್ಮ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಇಂದಿನ ಸಹಿ ಸಂಗ್ರಹ ದಲ್ಲಿ ಮೂಗೂರು ನಂಜುಂಡಸ್ವಾಮಿ, ಎಂ.ಜೆ ಸುರೇಶ್ ಗೌಡ , ತೇಜೇಶ್ ಲೋಕೇಶ್ ಗೌಡ, ಮಂಜುಳಾ, ಪ್ರಭುಶಂಕರ, ವರಕೂಡು ಕೃಷ್ಣೇಗೌಡ, ರಮೇಶ್ , ನೇಹಾ, ಸಿಂದುವಳ್ಳಿ ಶಿವಕುಮಾರ್, ಆಟೋ ಮಹಾದೇವ, ಅಶೋಕ್, ಪುಷ್ಪವತಿ ,ನಾಗರಾಜ್, ಕೃಷ್ಣಪ್ಪ, ಹನುಮಂತಯ್ಯ ,ಪ್ರಭಾಕರ, ಬಾಲು, ರವೀಶ್, ಭಾಗ್ಯಮ್ಮ ಮುಂತಾದವರು ಪಾಲ್ಗೊಂಡಿದ್ದರು.


Share this with Friends

Related Post