ಮೈಸೂರು,ಏ.23: ಮೈಸೂರಿನಲ್ಲಿ ಅರಿಶಿನ ಕುಂಕುಮ ವಿತರಿಸುವ ಮೂಲಕ ಮತದಾನ ಹೆಚ್ಚಳಕ್ಕೆ ವಿನೂತನ ಅಭಿಯಾನ ಹಮ್ಮಿಕೊಳ್ಳಲಾಯಿತು.
ಪ್ರತಿಯೊಬ್ಬರೂ ಕಡ್ಡಾಯ ಮತದಾನ ನಡೆಸಲು ವಿಶ್ವ ಹಿಂದೂ ಪರಿಷತ್ ಮೈಸೂರು ವಿಭಾಗದ ವತಿಯಿಂದ
ವಿದ್ಯಾರಣ್ಯಪುರಂನಲ್ಲಿರುವ ಅಂಬೇಡ್ಕರ್ ಕಾಲೋನಿಯಲ್ಲಿ ಮನೆಮನೆಗೆ ತೆರಳಿ ಮಹಿಳೆಯರಿಗೆ ಅರಿಶಿಣ, ಕುಂಕುಮ, ಹಾಗೂ ಕಡ್ಡಾಯ ಮತದಾನದ ಕರೆಯೋಲೆ ನೀಡಿ ಮತದಾನಕ್ಕೆ ಆಹ್ವಾನಿಸಲಾಯಿತು
ಈ ವೇಳೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಸಂಯೋಜಕಿ ಸವಿತಾ ಘಾಟ್ಕೆ ಮನವಿ ಮಾಡಿದರು.
ಮತದಾನ ಕೇವಲ ನಮ್ಮ ಹಕ್ಕು ಮಾತ್ರವಲ್ಲ, ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ, ನಾವು ಪ್ರತಿಯೊಂದು ಹಬ್ಬವನ್ನು ಕುಟುಂಬ ಸದಸ್ಯರ ಜೊತೆಗೆ ಆಚರಣೆ ಮಾಡುತ್ತೇವೋ ಅದೇ ರೀತಿ ನಮ್ಮ ದೇಶದ ಅತಿದೊಡ್ಡ ಹಬ್ಬ ಈ ಚುನಾವಣೆ ಹಬ್ಬವು ನಮ್ಮ ಹೆಮ್ಮೆ,ಈ ಹಬ್ಬದಲ್ಲಿ ನಗರ ಮತ್ತು ಜಿಲ್ಲೆಯ ಜನರು ಭಾಗವಹಿಸಬೇಕು ಎಂದು ಕೋರಿದರು.
ಸಹ ಕಾರ್ಯದರ್ಶಿ ಜಯಶ್ರೀ ಶಿವರಾಂ, ಪುನೀತ್, ಸೇವಾ ಪ್ರಮುಖ ಸರಸ್ವತಿ ಹಲಸಗಿ, ಪ್ರಖಂಡ ಸಂಯೋಜಕಿ ರೂಪ, ಭಾಗ್ಯ , ಲಲಿತಾಂಬ, ಸರಸ್ವತಿ ಪ್ರಸಾದ್ ಮಹಿಳೆಯರಿಗೆ ಬಾಗಿನ ನೀಡಿ ಕಡ್ಡಾಯ ಮತದಾನದ ಜಾಗೃತಿ ಮೂಡಿಸಿದರು.