Mon. Dec 23rd, 2024

ಗುಲಾಬಿ,ಮೈಸೂರು ಪಾಕ್‌ ನೀಡಿ ಮಕ್ಕಳಿಗೆ ಶಾಲೆಗೆ ಆಹ್ವಾನ

Share this with Friends

ಮೈಸೂರು, ಮೇ.31: ಗುಲಾಬಿ ಹೂವು, ಮೈಸೂರು ಪಾಕ್, ಪುಸ್ತಕ, ಪೆನ್ನು ನೀಡಿ ಶಾಲೆಗೆ ಮಕ್ಕಳನ್ನು ವಿಶೇಷವಾಗಿ ಬರಮಾಡಿಕೊಳ್ಳಲಾಯಿತು.

ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯನ್ನು ತಳಿರು,ತೋರಣಗಳಿಂದ ಅಲಂಕರಿಸಿದ ಅಪೂರ್ವ ಸ್ನೇಹ ಬಳಗ ಹಾಗೂ ಅರಿವು ಸಂಸ್ಥೆಯ ಸದಸ್ಯರು, ಮಕ್ಕಳಿಗೆ ಆರತಿ ಬೆಳಗಿ ಹೂವಿನ ಮೇಲೆ ನಡೆಸಿ, ಗುಲಾಬಿ ಹೂ ಹಾಗೂ ಮೈಸೂರು ಪಾಕ್ ಮತ್ತು ಪುಸ್ತಕ ಪೆನ್ನು ನೀಡಿ ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಂಡರು.

ಈ ವೇಳೆ ಹಿರಿಯ ಸಮಾಜಸೇವಕರಾದ ಕೆ ರಘುರಾಮ್ ವಾಜಪೇಯಿ ಮಾತನಾಡಿ, ವಿದ್ಯಾದೇವತೆ ಇರುವುದು ಕರ್ನಾಟಕದ ಶೃಂಗೇರಿಯಲ್ಲಿ, ವಿದ್ಯಾರ್ಥಿಯಾದವರು ಅಕ್ಷರಭ್ಯಾಸದಿಂದ ಹಿಡಿದು ಶಾಲಾ ಪ್ರವೇಶ ಮತ್ತು ಪರೀಕ್ಷೆ ಸಮಯದಲ್ಲಿ ಸರಸ್ವತಿ ಪೂಜೆ ಹೀಗೆ ಮೂರು ಬಾರಿ ಶಾರದೆಯನ್ನು ಉಪಾಸನೆ ಮಾಡುತ್ತಾರೆ ಎಂದು ತಿಳಿಸಿದರು.

ಸರ್ಕಾರವು ವಿದ್ಯಾಭ್ಯಾಸಕ್ಕಾಗಿಯೇ ಪ್ರತ್ಯೇಕ ಸಚಿವಾಲಯ ಹೊಂದಿದ್ದು, ಬಹಳ ದೊಡ್ಡ ಮಟ್ಟದಲ್ಲಿ ಹಣವನ್ನು ವಿನಿಯೋಗಸುತ್ತದೆ, ಸರ್ಕಾರಿ ಶಾಲೆಯಲ್ಲಿ ಉನ್ನತ ಮಟ್ಟದ ಸೌಲಭ್ಯಗಳು ಇದ್ದು, ಜೊತೆಗೆ ಶಾಲಾ ಶುಲ್ಕ ವಿನಾಯಿತಿ ಇದೆ, ಉಚಿತ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಊಟ, ಉಚಿತ ನೀಡುತ್ತಿರುವುದು ಶ್ಲಾಘನೀಯ, ಮಕ್ಕಳೆಲ್ಲರೂ ಈ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕೆ ಎಂದು ತಿಳಿಸಿದರು.

ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಎಸ್. ಎನ್ ರಾಜೇಶ್, ಸುಚಿಂದ್ರ, ಯದುನಂದನ್, ಆದರ್ಶ್, ಮುಖ್ಯೋಪಾಧ್ಯಾಯರಾದ ಸುಗುಣ, ಶಿಕ್ಷಕರಾದ ಶಿವಯ್ಯ, ನಾಗರತ್ನ, ಶಿಲ್ಪ, ಸಿಬ್ಬಂದಿ ಮಮತಾ ಮತ್ತಿತರರು ಹಾಜರಿದ್ದರು.


Share this with Friends

Related Post