ನವದೆಹಲಿ,ಮಾ.29: ಕೇಂದ್ರ ಆದಾಯ ತೆರಿಗೆ ಇಲಾಖೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲೇ 1,823 ಕೋಟಿ ರೂ. ತೆರಿಗೆ ನೀಡುವಂತೆ ಐಟಿ ಇಲಾಖೆ ಕಾಂಗ್ರೆಸ್ ಗೆ ನೋಟೀಸ್ ಜಾರಿ ಮಾಡಿದೆ.
ಇತ್ತೀಚೆಗಷ್ಟೆ 4 ಬ್ಯಾಂಕ್ ಗಳಲ್ಲಿರುವ ಕಾಂಗ್ರೆಸ್ ನ 11 ಖಾತೆಗಳನ್ನು ಫ್ರೀಜ್ ಮಾಡಿ ಶಾಕ್ ನೀಡಿದ್ದ ಆದಾಯ ತೆರಿಗೆ ಇಲಾಖೆ, ಈಗ ಚುನಾವಣೆ ಹೊತ್ತಿನಲ್ಲೇ 1994 -95 ನೇ ಸಾಲು ಮತ್ತು 2016 -17ನೇ ಸಾಲಿನಿಂದ ಈವರೆಗಿನ ಒಟ್ಟು 1,823 ಕೋಟಿ ರೂ. ತುಂಬುವಂತೆ ನೋಟೀಸ್ ನೀಡಿದೆ.
ಆದಾಯ ತೆರಿಗೆ ಪಾವತಿಗೆ ರಾಜಕೀಯ ಪಕ್ಷಗಳಿಗೆ ವಿನಾಯಿತಿ ಇದೆ, ಆದರೆ ಅದನ್ನು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಇದೇ ರೀತಿ ಬಿಜೆಪಿಗೆ ನೋಟೀಸ್ ನೀಡುವದಾದರೆ 4 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ದಂಡ ವಿಧಿಸಬೇಕು, ಆದರೆ ಆ ಪಕ್ಷಕ್ಕೆ ಯಾವುದೇ ನೋಟೀಸ್ ನೀಡಲಾಗಿಲ್ಲ. ಕೇಂದ್ರ ಸರಕಾರ ಐಟಿ, ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಹಿಂದೆ ಬ್ಯಾಂಕ್ ಅಕೌಂಟ್ ಗಳನ್ನು ಫ್ರೀಜ್ ಮಾಡಿದ್ದರಿಂದ ನಮಗೆ ಚಹಾ ಕುಡಿಯಲು ಸಹ ಹಣವಿಲ್ಲ ಎಂದು ಕಾಂಗ್ರೆಸ್ ಹೇಳಿತ್ತು. ಇದೀಗ 1,823 ಕೋಟಿ ರೂ. ಕಟ್ಟುವಂತೆ ಹೇಳುವ ಮೂಲಕ ಐಟಿ ಮತ್ತೆ ಶಾಕ್ ನೀಡಿದೆ,ಹಾಗಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರ ಮತ್ತು ಐಟಿ ವಿರುದ್ದ ಅಸಮಾಧಾನ ಪಟ್ಟಿದೆ.