ಬೆಂಗಳೂರು, ಜೂ.16: ಒಬ್ಬ ಸೆಲೆಬ್ರಿಟಿಗೆ ಕೆಟ್ಟ ಮೆಸೇಜ್ ಮಾಡಿ ಕಿರುಕುಳ ನೀಡುವ ಹಕ್ಕನ್ನು ಪಬ್ಲಿಕ್ ಗೆ ಕೊಟ್ಟವರು ಯಾರು ಎಂದು ತೆಲುಗು ನಟಿ ಕಸ್ತೂರಿ ಶಂಕರ್ ಪ್ರಶ್ನಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ತೆಲುಗು ನಟಿ, ನಾನು ಯಾವುದೇ ಹಿಂಸಾಕೃತ್ಯಗಳನ್ನು ಬೆಂಬಲಿಸುವುದಿಲ್ಲ, ಆದರೆ ರೇಣುಕಾಸ್ವಾಮಿ ಒಳ್ಳೆಯ ವ್ಯಕ್ತಿಯಲ್ಲ, ಪವಿತ್ರ ಗೌಡ ಎಂಬವರಿಗೆ ಕಿರುಕುಳ ನೀಡಿದ್ದಾನೆ,ಆತನಿಗೆ ಯಾಕೆ ಬೇಕಿತ್ತು ಮೆಸೇಜ್ ಮಾಡುವ ಕೆಲಸ ಎಂದು ಕೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿದ್ದ ಅಲ್ವ, ಹಾಗಿದ್ದ ಮೇಲೆ ಪೊಲೀಸ್ ಇದ್ದಾರೆ, ಕೋರ್ಟ್ ಇದೆ. ಖಾಸಗಿ ಜೀವನದಲ್ಲಿ ತೊಂದರೆ ಆದಾಗ ಮೊದಲ ಪತ್ನಿ ಇದ್ದಾರೆ, ಇದು ಅವರ ಕೆಲಸ, ಒಬ್ಬ ಸೆಲೆಬ್ರಿಟಿಗೆ ಮೆಸೇಜ್ ಮಾಡಿ ಕಿರುಕುಳ ನೀಡುವ ಹಕ್ಕನ್ನು ಪಬ್ಲಿಕ್ ಗೆ ಯಾರು ಕೊಟ್ಟವರು ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.
ದರ್ಶನ್ ಕೇಸ್ ಇದಕ್ಕೆ ಹತ್ತಿರವಾಗಿದೆ, ಮೆಸೇಜ್ ನೋಡಿಯೇ ಅವರ ಅಭಿಮಾನಿಗಳು ರೇಣುಕಾಸ್ವಾಮಿಗೆ ಹೊಡೆದು ಪಾಠ ಕಲಿಸಲು ಬಯಸಿದ್ದರು. ಆದರೆ ಆತ ದುರದೃಷ್ಟವಶಾತ್ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಟಿಯರಿಗೆ ಅಸಭ್ಯ ಕಾಮೆಂಟ್ ಹಾಕುವುದು ಖಂಡಿತಾ ಸರಿಯಲ್ಲ, ಮಹಿಳೆಯರಿಗೆ ಕಿರುಕುಳ ನೀಡುವ ಹಕ್ಕು ಇವರಿಗೆ ಯಾರು ಕೊಟ್ಟವರು ಎಂದು ಕಸ್ತೂರಿ ಶಂಕರ್ ಪ್ರಶ್ನಿಸಿದ್ದು,ನಟಿ ರಶ್ಮಿಕಾ ಮಂದಣ್ಣ ಅವರ ಫೇಕ್ ಎಐ ವಿಡಿಯೋ ಕ್ರಿಯೇಟ್ ಮಾಡಿ ವೈರಲ್ ಮಾಡಿ ಕಿರುಕುಳ ನೀಡಲಾಗಿತ್ತು ಎಂಬುದನ್ನೂ ಉಲ್ಲೇಖಿಸಿದ್ದಾರೆ.