Tue. Dec 24th, 2024

ದೇಶ ಕಟ್ಟಲು ಕೈಜೋಡಿಸಿ ಚುನಾವಣೆ ಯಶಸ್ವಿಗೊಳಿಸಿ:ಡಾ. ಕೆ.ವಿ.ರಾಜೇಂದ್ರ

Share this with Friends

ಮೈಸೂರು.ಏ.23: ದೇಶ ಕಟ್ಟಲು ಕೈಜೋಡಿಸಿ ಚುನಾವಣೆ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ ರಾಜೇಂದ್ರ ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ನಗರದ ಶಾರದಾ ವಿಲಾಸ ಕಾಲೇಜು ಸಭಾಂಗಣದಲ್ಲಿ ನಡೆದ ಮತಗಟ್ಟೆಗೆ ನೇಮಕಗೊಂಡಿರುವ ಸ್ವಯಂ ಸೇವಕರ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇದು ಕೇವಲ ಅಧಿಕಾರಿಗಳ ಜವಾಬ್ದಾರಿಯಲ್ಲ, ಪ್ರತಿಯೊಬ್ಬರೂ ಚುನಾವಣೆಯಲ್ಲಿ ಪಾಲ್ಗೊಂಡು ಕಡ್ಡಾಯವಾಗಿ ಮತದಾನ ಮಾಡುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಸ್ವಯಂ ಸೇವಕರು ಮತದಾರರಿಗೆ ಮತಗಟ್ಟೆ ಕೇಂದ್ರದಲ್ಲಿ ಇರುವ ಸೌಲಭ್ಯಗಳ ಬಗ್ಗೆ ತಿಳಿಸಬೇಕು,ಪ್ರತ್ಯೇಕ ಸರದಿ ಸಾಲನ್ನು ಅನುಸರಿಸಿ,ಶಾಂತಿಯುತ ಮತದಾನ ಮಾಡುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಅಶಕ್ತರು ಅಂಗವಿಕಲರು,ವೃದ್ಧರು ಹಿರಿಯ ನಾಗರೀಕರಿಗೆ ಮತ್ತು ಮಹಿಳೆಯರಿಗೆ ಮತದಾನ ಮಾಡಲು ಸಹಾಯಾವಾಗುವಂತೆ ಮತಗಟ್ಟೆಗಳಲ್ಲಿ ಕಲ್ಪಿಸಲಾಗಿರುವ ವೀಲ್ ಚೇರ್ ,ಕುಡಿಯುವ ನೀರು ,ಶೌಚಾಲಯ ವಿಶ್ರಾಂತಿ ಕೊಠಡಿ ಇತ್ಯಾದಿ ವ್ಯವಸ್ಥೆಗಳ ಬಗ್ಗೆ ಮತದಾರಿಗೆ ತಿಳಿಸಬೇಕು.

ಸ್ವಯಂ ಸೇವಕರು ಭವ್ಯ ಭಾರತದ ಪ್ರಜೆಗಳು ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೇ ಕೆಲಸ ನಿರ್ವಹಿಸುವವರು ಸ್ವಯಂ ಸೇವಕರು. ಸೈನಿಕರು ದೇಶವನ್ನು ಕಾಯುವಂತೆ, ನಿಮಗೆ ದೇಶವನ್ನು ಕಟ್ಟುವಂತಹ ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಚುನಾವಣೆಯ ಯಶಸ್ಸಿನ ಭಗವಾಗಬೇಕು ಎಂದು ಸಲಹೆ ನೀಡಿದರು.

ಸ್ವಯಂ ಸೇವಕರಾಗಿ ಆಯ್ಕೆ ಆದವರು ಮತದಾನದ ದಿನ ಬೆಳಿಗ್ಗೆ 6 ಗಂಟೆಗೆ ಮತಗಟ್ಟೆಯ ಬಳಿ ಬಂದು ತಮ್ಮ ಮತಗಟ್ಟೆಯನ್ನು ಮುಂಚಿತವಾಗಿ ಪರೀಕ್ಷಿಸಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ.ಗಾಯಿತ್ರಿ ಅವರು ಮಾತನಾಡಿ,18 ವರ್ಷ ತುಂಬಿದ ಎಲ್ಲರೂ ತಪ್ಪದೆ ಮತದಾನ ಮಾಡೇಕು ಎಂದು ತಿಳಿಸಿದರು.

ಜಿಲ್ಲಾ ಸ್ವೀಪ್ ಸಮಿತಿಯ ಸಹಾಯಕ ನೋಡಲ್ ಅಧಿಕಾರಿ ಎಂ.ಶಾಂತ,
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಪಾಂಡು,ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರುದ್ರೇಶ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Share this with Friends

Related Post