Sun. Dec 22nd, 2024

ಬಹುನಿರೀಕ್ಷಿತ ಜೋಕರ್-2 ಟ್ರ‍ೇಲರ್ ಔಟ್

Share this with Friends

ಹಾಲಿವುಡ್ ನ ಬಹುನಿರೀಕ್ಷಿತ ಜೋಕರ್-2 ಟ್ರೇಲರ್ ಬಿಡುಗಡೆಯಾಗಿದೆ. 2019 ರಲ್ಲಿಹಾಲಿವುಡ್ ನಲ್ಲಿತೆರಕಂಡ ʼಜೋಕರ್ʼ ಎನ್ನುವ ಸಿನಿಮಾ ದೊ ಡ್ಡಹಿಟ್ ಆಗಿತ್ತು. ಇದೀಗ ಈ ಸಿನಿಮಾದ ಸೀಕ್ವೆಲ್ ತೆರೆಗೆ ಸಿದ್ದವಾಗಿದೆ.

ಮ್ಯೂಸಿಕಲ್ ಸೈಕಲಾಜಿಕಲ್ ಥ್ರಿಲ್ಲರ್ ʼಜೋಕರ್ -2ʼ ನಲ್ಲಿಜೋಕ್ವಿನ್ ಫೀನಿಕ್ಸ್ ಜೊತೆ ಲೇಡಿ ಗಾಗಾ ಪ್ರಮುಖ ಪಾತ್ರದಲ್ಲಿಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಬಹುಮಟ್ಟಿಗೆ ಅಕ್ತೋಬರ್ 4 ರಂದು ಬಿಡುಗಡೆಯಾಗಲಿದೆ.

ಸಿನಿಮಾದಲ್ಲಿಜೋಕ್ವಿನ್ ಫೀನಿಕ್ಸ್, ಲೇಡಿ ಗಾಗಾ,ಝಾಜಿ ಬೀಟ್ಜ್, ಕ್ಯಾಥರೀನ್ ಕೀನರ್ ,ಬ್ರೆಂಡನ್ ಗ್ಲೀ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈ ಸಿನಿಮಾದಲ್ಲೆ ಈ ಅಪರಾಧಗಳ ಪಾಲುದಾರರು, ಜೊತೆಯಾಗಿ ಅಪರಾಧ ಕೃತ್ಯವನ್ನು ನಡೆಸುವವರು ಮತ್ತೊಂದು ಲೋಕವನ್ನು ನಿಮ್ಮೆದುರು ತೆರೆದಿಡುತ್ತಾರೆ. ಜೊತೆಗೆ ಜೋಕೇನ್ ಫಿನಿಕ್ಸ್ ಅವರು ಈ ಸಿನಿಮಾದ ಮೂಲಕ ಕಂ ಬ್ಯಾಕ್ ಮಾಡುತ್ತಿದ್ದಾರೆ.


Share this with Friends

Related Post