ಮೈಸೂರು, ಜೂ.21: 365 ದಿನದಲ್ಲಿ ಜೂನ್ 21 ಅತಿ ದೀರ್ಘ ಹಗಲು ಹೊಂದಿರುವ ದಿನ
ಎಂದು ಚಾಮುಂಡೇಶ್ವರಿ ಕ್ಷೇತ್ರ(ನಗರ)
ಬಿಜೆಪಿ ಮಂಡಲ ಅಧ್ಯಕ್ಷ ರಾಕೇಶ್ ಭಟ್ ತಿಳಿಸಿದರು.
ಜೂನ್ 21 ಭೂಮಿಯ ಉತ್ತರಾರ್ಧ ಗೋಳದಲ್ಲಿ ಸೂರ್ಯ ಅತಿ ಹೆಚ್ಚು ಹೊತ್ತು ಕಂಗೊಳಿಸುತ್ತಾನೆ ಇದು ಅತ್ಯಂತ ಸುದಿನ,ಈ ದಿನ ಯೋಗಾಸನ ಮಾಡುವುದರ ಜೊತೆಗೆ ಹೆಚ್ಚಿನ ಜನರಿಗೆ ಯೋಗ ಮಾಡಲು ಪ್ರೇರೇಪಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ವತಿಯಿಂದ ರಾಮಕೃಷ್ಣ ನಗರದ ವಿಶ್ವಮಾನವ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ರಾಕೇಶ್ ಭಟ್ ಮಾತನಾಡಿದರು.
ಕೇವಲ ಸೂರ್ಯ ನಮಸ್ಕಾರದಿಂದಲೇ ಅನೇಕ ಪ್ರಯೋಜನಗಳಿವೆ ಎಂದು ತಿಳಿಸಿದ ಅವರು,ಪ್ರಧಾನಿ ನರೇಂದ್ರ ಮೋದಿಯವರು ಫಿಟ್ ಇಂಡಿಯಾ ಹಾಗೂ ಯೋಗ ದಿನಾಚರಣೆಗೆ ಕರೆ ನೀಡುವ ಮೂಲಕ ದೇಶದ ನಾಗರೀಕರು ಹಾಗೂ ಬಿಜೆಪಿ ಕಾರ್ಯಕರ್ತರು ಸದೃಢರಾಗಿ ಆರೋಗ್ಯವಂತರಾಗಿ ದೇಶ ಸೇವೆಯಲ್ಲಿ ತೊಡಗಬೇಕೆಂಬ ಇಚ್ಛೆ ಹೊಂದಿದ್ದಾರೆ ಇದನ್ನು ನಾವೆಲ್ಲ ಪಸಲಿಸಬೇಕು ಎಂದು ಹೇಳಿದರು.
ಭಾರತದ ಪ್ರಾಚೀನ ವಿದ್ಯೆಗಳಲ್ಲಿ ಯೋಗ ಪ್ರಮುಖವಾದದ್ದು,ಇಡೀ ಜಗತ್ತನ್ನು ಭಾರತದಡೆಗೆ ಸೆಳೆಯುತ್ತಾ ಜನರ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಯುವ ಯೋಗ ಪಟು ಸ್ಪೂರ್ತಿ ಈ. ಗೌಡ ಆಯ್ದ ಆಸನಗಳನ್ನು ಪ್ರದರ್ಶಿಸುವುದರ ಜೊತೆಗೆ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದರು.
ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು, ಪಾಲಿಕೆ ಮಾಜಿ ಸದಸ್ಯರಾದ ಆರ್.ಕೆ. ಶರತ್ ಕುಮಾರ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಈರೇಗೌಡ, ಆರ್. ಸೋಮಶೇಖರ್, ಉಪಾಧ್ಯಕ್ಷರಾದ ಹೆಚ್. ಜಿ. ರಾಜಮಣಿ, ಬಿ.ಸಿ ಶಶಿಕಾಂತ್ ಶಿವಕುಮಾರ್, ಲಲಿತ, ಜೆಡಿಎಸ್ ಮುಖಂಡರಾದ ದಿನೇಶ್, ಬಿಜೆಪಿ ಮುಖಂಡರಾದ ತುಳಸಿ, ನಾಗರಾಜ್ ಜನ್ನು, ಚಂದ್ರಶೇಖರ ಸ್ವಾಮಿ, ಶುಭಶ್ರೀ, ನವೀನ್, ಸುಬ್ರಮಣಿ, ಪುಟ್ಟಮಣಿ, ಹೇಮಲತಾ, ರವಿಕುಮಾರ್ ಇತರರು ಭಾಗವಹಿಸಿದ್ದರು.