Fri. Nov 1st, 2024

ಇಂಗ್ಲೀಷ್ ನಾಮಫಲಕಗಳಿಗೆ ಮಸಿ ಬಳಿದು ಕ ರ‌ ವೇ ಸದಸ್ಯರ ಆಕ್ರೋಶ

Share this with Friends

ಹಾಸನ,ಮಾ.5: ಶೇಕಡ 60ರಷ್ಟು ಕನ್ನಡ ಬಳಕೆ ಮಾಡದ ನಾಮಫಲಕಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು‌ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನ ರೈಲ್ವೆ ನಿಲ್ದಾಣದ ಬಳಿಯಿಂದ ಹೊರಟ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೆದ್ದಾರಿ ಪಕ್ಕದಲ್ಲಿದ್ದ ಇಂಗ್ಲಿಷ್ ನಾಮಪಲಕಗಳನ್ನು ತೆರವು ಮಾಡಿ ಕೆಲವು ನಾಮಫಲಕಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮನು ಕುಮಾರ್ ಕರ್ನಾಟಕದಲ್ಲಿ ಕನ್ನಡ ನಾಮಫಲಕ ಇರಬೇಕು ಎಂಬ ಹಕ್ಕುತಾಯವನ್ನು ಕನ್ನಡದ ರಕ್ಷಣಾ ವೇದಿಕೆ ಮಾಡಿತ್ತು ಅದರಂತೆ ಕಳೆದ ಡಿಸೆಂಬರ್ 22ರಂದು ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ಸಹ ಹಮ್ಮಿಕೊಳ್ಳಲಾಗಿತ್ತು ನಂತರ ಸರ್ಕಾರ ಶೇಕಡ 60ರಷ್ಟು ಕನ್ನಡ ನಾಮಫಲಕವನ್ನು ಹಾಕಬೇಕು ಎಂದು ಫೆಬ್ರವರಿ 28ರ ವರೆಗೆ ಗಡುವನ್ನು ನೀಡಿತ್ತು ಎಂದು ಹೇಳಿದರು.

ಅಲ್ಲದೆ ಕರ್ನಾಟಕ ರಕ್ಷಣಾ ವೇದಿಕೆ ಜಾಥಾ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು ಆದರೂ ಬಹುತೇಕರು ತಮ್ಮ ಅಂಗಡಿಗಳ ನವಫಲಕದಲ್ಲಿ ಕನ್ನಡ ಬಳಕೆ ಮಾಡಿಲ್ಲ ಹಾಗಾಗು ಇಂಗ್ಲೀಷ್ ‌ನಾಮಫಲಕ ತೆರವು ಮಾಡಿ ಮಸಿ ಬಳಿಯುವ ಕಾರ್ಯ ಮಾಡಿದ್ದೇವೆ ಎಂದು ತಿಳಿಸಿದರು.

ಕರವೇ ಸದಸ್ಯರಾದ ಸೀತಾರಾಮ್, ಹೇಮಂತ್ , ಸೋಮಶೇಖರ್ , ಓಹಿಲೇಶ್, ಪ್ರೀತಂರಾಜ್ ಸೇರಿದಂತೆ ಅನೇಕರು ಹಾಜರಿದ್ದರು.


Share this with Friends

Related Post