Thu. Jan 2nd, 2025

ಕೇಂದ್ರ ಸಚಿವ ವಿ ಸೋಮಣ್ಣ ಅವರನ್ನು ಅಭಿನಂದಿಸಿದ ಕರವೇ ನಾರಾಯಣಗೌಡ

Share this with Friends

ಬೆಂಗಳೂರು, ಜೂ.15: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ನೂತನ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ ನಾರಾಯಣಗೌಡ ಅಭಿನಂದಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸೋಮಣ್ಣ ಅವರನ್ನು ಭೇಟಿ ಮಾಡಿದ ನಾರಾಯಣ ಗೌಡ ಅವರು,ಶಾಲು ಹೊದಿಸಿ ಹೂ‌ ಗುಚ್ಛ ನೀಡಿ ಹಾರ ಹಾಕಿ ಆತ್ಮೀಯವಾಗಿ ಅಭಿನಂಧಿಸಿ ಶುಭ ಹಾರೈಸಿದರು.

ವಿ.ಸೋಮಣ್ಣ ಅವರು ನನ್ನ
ಆತ್ಮೀಯರು, ಅವರನ್ನು ಭೇಟಿಯಾಗಿ ಅಭಿನಂದಿಸಿದ್ದೇನೆ,ಅವರು ರಾಜ್ಯದ ಅತ್ಯಂತ ಕ್ರಿಯಾಶೀಲ, ಜನಾನುರಾಗಿ ಜನನಾಯಕರು ಎಂದು ನಾರಾಯಣ ಗೌಡ ಬಣ್ಣಿಸಿದ್ದಾರೆ.

ನೆನೆಗುದಿಗೆ ಬಿದ್ದಿರುವ ರೈಲು ಮಾರ್ಗಗಳು ಮತ್ತು ಯೋಜನೆಗಳು ವಿ.ಸೋಮಣ್ಣ ಅವರ ಅಧಿಕಾರಾವಧಿಯಲ್ಲಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿವೆ ಎಂದು ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Share this with Friends

Related Post