Tue. Dec 24th, 2024

ಮಹಿಳೆಯರಿಗಾಗಿ ವ್ಯಸನ ವಿಮುಕ್ತಿ ಕೆಂದ್ರ ಪ್ರಾರಂಭಿಸಿದ ಕಾಡಬಮ್ಸ್ ಆಸ್ಪತ್ರೆ

Share this with Friends

ಬೆಂಗಳೂರು,ಮಾ.27: ಭಾರತದ ದೊಡ್ಡ ಖಾಸಗಿ ಮಾನಸಿಕ ಆರೋಗ್ಯ ಸಂಸ್ಥೆಯಾದ ಕಾಡಬಮ್ಸ್ ಆಸ್ಪತ್ರೆ ಅನುನಿತಾ ಡೆಡಿಕ್ಷನ್ ಸೆಂಟರ್ ಫಾರ್ ವುಮೆನ್ ಕೇಂದ್ರ ಪ್ರಾರಂಭಿಸಲಿದೆ.

ಮಹಿಳೆಯರಿಗಾಗಿ ವ್ಯಸನ ವಿಮುಕ್ತಿ ಕೇಂದ್ರ ಪ್ರಾರಂಭಿಸುವುದಾಗಿ ಇಂದು ಘೋಷಿಸಿದ್ದು, ಇದು ಮಾದಕ ವ್ಯಸನದಿಂದ ಹೋರಾಡುತ್ತಿರುವ ಮಹಿಳೆಯರನ್ನು ಬೆಂಬಲಿಸಲು ಮೀಸಲಾಗಿರುವ ವಿಶೇಷವಾದ ಡಿ-ಅಡಿಕ್ಷನ್ ಸೆಂಟರ್ ಆಗಿದೆ.

ಭಾರತದಲ್ಲಿನ ಮಾದಕ ವಸ್ತುವಿನ ಬಳಕೆಯ ರಾಷ್ಟ್ರೀಯ ಸಮೀಕ್ಷೆಯು ಆಘಾತಕಾರಿ ಅಂಕಿಅಂಶವನ್ನು ಬಹಿರಂಗಪಡಿಸಿದ್ದು, 57.4 ಲಕ್ಷ ಮಹಿಳೆಯರು ಮಾದಕ ವ್ಯಸನದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ
ಎಂದು ಕಡಬಮ್ಸ್ ಆಸ್ಪತ್ರೆಯ ಮನಶ್ಯಾಸ್ತ್ರಜ್ಞರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ನೇಹಾ ಕಡಬಮ್ ಹೇಳಿದರು.

ಮಹಿಳೆಯರಿಗಾಗಿ ಅನುನಿತಾ ಡೆಡಿಕ್ಷನ್ ಸೆಂಟರ್ ಮಹಿಳೆಯರ ವ್ಯಸನ ಮುಕ್ತತೆಯ ಸುತ್ತಲಿನ ತಪ್ಪು ಗ್ರಹಿಕೆಗಳನ್ನು ತೆಗೆದು ಹಾಕಿ, ಅದರ ಬಗ್ಗೆ ಹೊಸ ಪರಿಕಲ್ಪನೆಯನ್ನು ರಚಿಸುವ ಗುರಿಯನ್ನು ಹೊಂದಿದೆ‌ ಎಂದು
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಸಂದೇಶ್ ಕಡಬಮ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಾಕ್ಟರ್ ಪ್ರಿಯಾ ರಾಘವನ್, ಡಾ. ಮಧುಕರ್ ಸಂದೇಶ್ ಸುದ್ದಿಗೋಷ್ಠಿಯಲ್ಲಿ
ಉಪಸ್ಥಿತರಿದ್ದರು.


Share this with Friends

Related Post