Mon. Dec 23rd, 2024

ನಮ್ಮೆಲ್ಲರ ಜೀವನದ ಭಾಷೆ ಕನ್ನಡ:ಇಳೈ ಆಳ್ವರ್‌ ಸ್ವಾಮೀಜಿ

Share this with Friends

ಮೈಸೂರು: ನಾವು ಎಷ್ಟೇ ಭಾಷೆಗಳನ್ನು ಕಲಿತಿದ್ದರೂ ನಮ್ಮ ಜೀವನದ ಭಾಷೆ ಕನ್ನಡವೆ ಆಗಿದೆ ಎಂದು ಮೇಲುಕೋಟೆ ಇಳ್ಳೆ ಆಳ್ವರ್‌ ಸ್ವಾಮಿಗಳು ನುಡಿದರು.

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾ ಮಂಟಪದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ಹಾಗೂ ಕೀರ್ತಿ ಯುವತಿ ಮಹಿಳಾ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಸ್ವಾಮಿಗಳು ಮಾತನಾಡಿ,
ಸಾವಿರಾರು ವರ್ಷದ ಇತಿಹಾಸವಿರುವ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಅನೇಕ ಮಹನೀಯರ ಕೊಡುಗೆ ಇದೆ ಎಂದು ಹೇಳಿದರು.

ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಮಾತನಾಡಿ
ಕರ್ನಾಟಕ ರಾಜ್ಯೋತ್ಸವ ಆಚರಣೆ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನ ಕನ್ನಡ ಭಾಷೆ ಬಳಸುವ ಮೂಲಕ ನಿತ್ಯದ ಹಬ್ಬವಾಗಬೇಕು ಎಂದು ಹೇಳಿದರು

ಈ ವೇಳೆ ಎಸ್ ಎಸ್ ಎಲ್ ಸಿ ಹಾಗು ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಅಂಕವೀರ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಆನಂತರ ವಿವಿಧ ಕ್ಷೇತ್ರದ ಸಾಧಕರಾದ
ಪುಟ್ಟರಾಜು ಸಿ ಆರ್ (ಜಾನಪದ ಕ್ಷೇತ್ರ)
ಯಶೋಧ ರಾಮಕೃಷ್ಣ (ಸಾಹಿತ್ಯ)
ಶಾಂತವ್ವ ಹಾವನ್ನವರ (ಜನಪದ)
ಸಿ ಎಸ್ ರೋಹಿತ್ ಕುಮಾರ್ (ಸಮಾಜ ಸೇವೆ) ಜಿ ಕೆ ಈರಪ್ಪ (ರಂಗಭೂಮಿ)
ಎಲ್ ಕೆ ಶಶಿಕಲಾ ಪುಟ್ಟರಾಜು (ಜನಪದ)
ಚಿ ರಾಧಾಕೃಷ್ಣ (ಸಾಹಿತ್ಯ) ಇವರುಗಳಿಗೆ
ಸುವರ್ಣ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನಿಧಿ ಗೌರವಿಸಲಾಯಿತು.

ಕಸ್ತೂರಿ ಸಿರಿಗನ್ನಡ ವೇದಿಕೆ ಹಾಗೂ ಕೀರ್ತಿ ಯುವತಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಕೆ ಮಂಜುಳಾ ರಮೇಶ್,
ಲಯನ್ಸ್ ಕ್ಲಬ್ ಆಫ್ ಮೈಸೂರು ಬಾಂಧವ್ಯ ಅಧ್ಯಕ್ಷರಾದ ವಿಜಯ್ ಕುಮಾರ್ ಎಂ,
ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷರಾದ ಪೋತೆರ ಮಹದೇವ್,
ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿ ಎನ್ ವಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post