Fri. Nov 1st, 2024

ಕನ್ನಡ ರಾಜ್ಯೋತ್ಸವ : ಮಗುವಿಗೆ ತಾಯಿ ಹಾಲು ಹೇಗೆ ಮುಖ್ಯವೋ, ಹಾಗೆ ಕನ್ನಡಿಗರಿಗೆ ಮಾತೃಭಾಷೆ ಕನ್ನಡ ಅಷ್ಟೇ ಮುಖ್ಯ

Share this with Friends

ನಂಜನಗೂಡು, ನ.೦೧ : ಮಗುವಿಗೆ ತಾಯಿ ಹಾಲು ಹೇಗೆ ಮುಖ್ಯವೋ, ಹಾಗೆಯೇ ಪ್ರತಿಯೊಬ್ಬ ಕನ್ನಡಿಗರಿಗೆ ತನ್ನ ಮಾತೃಭಾಷೆ ಕನ್ನಡ ಅಷ್ಟೇ ಮುಖ್ಯ ಎಂದು ಕನ್ನಡ ಉಪನ್ಯಾಸಕ ಎನ್. ನಾಗರಾಜ್ ರವರು ಮಾತೃಭಾಷೆಯ ಪ್ರಾಮುಖ್ಯತೆಯನ್ನು ತಿಳಿಸಿದರು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಮಾತೃಭಾಷೆ ಕನ್ನಡವನ್ನು ಮನಪೂರಕವಾಗಿ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಬಳಸಬೇಕು ಎಂದು ತಮ್ಮ ಕರೆ ನೀಡಿದರು.

ಸಮಾರಂಭದಲ್ಲಿ ಆಂಗ್ಲ ಭಾಷೆಯ ಉಪನ್ಯಾಸಕರಾದ ರಂಗಸ್ವಾಮಿರವರು ಹರಿದು ಹಂಚಿ ಹೋಗಿದ್ದ ಕರ್ನಾಟಕ ರಾಜ್ಯ ಹೇಗೆ ಉಗಮವಾಯಿತು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಕನ್ನಡ ಉಪನ್ಯಾಸಕಿ ಡಾ. ಕೆ. ಮಾಲತಿ ರವರು ಕನ್ನಡ ಸಾಹಿತ್ಯ ಬೆಳೆದು ಬಂದ ಬಗೆಯನ್ನು ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಕನ್ನಡ ಭಾಷೆಯನ್ನು ಬಳಸುವುದರ ಬಗ್ಗೆ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್ ರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಮಾತೃಭಾಷೆ ಬೇರೆಯಾದರೂ ಕನ್ನಡದ ಮಹಾನ್ ಸಾಹಿತಿಗಳು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿ ಅಪಾರ ಪ್ರಮಾಣದಲ್ಲಿ ಸಾಹಿತ್ಯ ರಚನೆಯನ್ನು ಮಾಡಿರುವರು. ಹಾಗಾಗಿ ಕನ್ನಡ ಮಾತೃಭಾಷೆ ಮಾತನಾಡುವರು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದರೆ ಖಂಡಿತವಾಗಿಯೂ ಕನ್ನಡವು ಇನ್ನು ಮೇಲ್ಮಟ್ಟಕ್ಕೆ ಹೋಗಲು ಸಾಧ್ಯ ಎಂದು ನುಡಿದರು.

ಕಾರ್ಯಕ್ರಮದ ಸ್ವಾಗತವನ್ನು ಎನ್. ದಿನೇಶ್, ವಂದನಾರ್ಪಣೆಯನ್ನು ಲಿಂಗಣ್ಣ ಸ್ವಾಮಿ, ಕನ್ನಡ ಗೀತೆಗಳನ್ನು ಬಿಂದು ಮತ್ತು ಸಂಗಡಿಗರು, ಕಾರ್ಯಕ್ರಮದ ನಿರೂಪಣೆಯನ್ನು ನಾಗರಾಜ್ ಮಾಡಿದರು .ಕಾರ್ಯಕ್ರಮದಲ್ಲಿ ಅಶ್ವಥ್ ನಾರಾಯಣಗೌಡ, ಟಿ ಕೆ ರವಿ, ಪ್ರಕಾಶ್ ಹೆಚ್ಚ್.ಕೆ, ಸ್ವಾಮಿ ಗೌಡ. ರೂಪ. ಸುಮಾ. ವತ್ಸಲ. ವಸಂತ್ ಕುಮಾರಿ, ಸುಮಿತ್ರ, ಹರೀಶ್ ಕೆ.ಎಸ್, ನಾಗರಾಜ ರೆಡ್ಡಿ, ಮೀನಾ, ಅದಿಲ್ ಹುಸೇನ್, ಸುಲಕ್ಷಣ, ಹರೀಶ್ ಎನ್.ಎಮ್, ಕಾವ್ಯ, ಮೀಲ್ಟನ್, ಲಿಂಗಯ್ಯ, ಮಹದೇವಸ್ವಾಮಿ ಉಪಸ್ಥಿತರಿದ್ದರು.


Share this with Friends

Related Post