Thu. Apr 3rd, 2025

ಇಂದು ಆಸ್ಪತ್ರೆಯಿಂದ ಶಿವಣ್ಣ ಡಿಸ್ಚಾರ್ಜ್

Shivarajkumar
Share this with Friends

ಬೆಂಗಳೂರು.ಎ.02 : ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹ್ಯಾಟ್ರಿಕ್ ಹೀರೋ, ನಟ ಶಿವರಾಜ್ ಕುಮಾರ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿದೆ. ಕಿಡ್ನಿ ಸ್ಟೋನ್ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗುತ್ತಿದೆ.

ಕಿಡ್ನಿ ಸ್ಟೋನ್ ಆಗಿತ್ತು ಎನ್ನುವ ಮಾಹಿತಿ ಹೊರತುಪಡಿಸಿ ಯಾವುದೇ ಗಂಭೀರ ಸ್ವರೂಪದ ಕಾರಣಗಳು ತಿಳಿದುಬಂದಿಲ್ಲ ಎಂದ ವೈದ್ಯರ ಮೂಲಗಳು ತಿಳಿಸಿದೆ. ಇದೀಗ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು ಇಂದು ಡಿಸ್ಚಾರ್ಜ್ ಆದ ನಂತರ ಮತ್ತೆ ಚುನಾವಣೆ ಪ್ರಚಾರಕ್ಕೆ ತೆರಳೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಲೋಸಕಭಾ ಚುನಾವಣೆಯ ಪ್ರಚಾರ ಮತ್ತು ಸತತ ಚಿತ್ರೀಕರಣದಿಂದಾಗಿ ಹೆಚ್ಚು ದಣಿದಿದ್ದ ನಟ ಶಿವರಾಜ್​ಕುಮಾರ್​ ಅವರು ಶೂಟಿಂಗ್ ವೇಳೆ ಸುಸ್ತು ಕಾಣಿಸಿಕೊಂಡ ಹಿನ್ನೆಲೆ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಿನ್ನೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಇಂದು ಮನೆಗೆ ವಾಪಸ್ಸಾಗಲಿದ್ದಾರೆ.


Share this with Friends

Related Post