Mon. Dec 23rd, 2024

ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ:ಡಿಕೆಶಿ ಬಣ್ಣನೆ

Share this with Friends

ಮಂಡ್ಯ,ಜು.29: ಇಂದು ಸಂಭ್ರಮದ ದಿನ, ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಣ್ಣಿಸಿದರು.

ಜನರ ಜೀವನಾಡಿ ಕೃಷ್ಣರಾಜ ಸಾಗರ ಭರ್ತಿಯಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನದಿಗೆ ಬಾಗಿನ ಸಮರ್ಪಿಸಿದ ನಂತರ ಡಿಕೆಶಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಂಡ್ಯ, ಮೈಸೂರು,ಹಾಸನ, ತಮಿಳುನಾಡಿನ ವರೆಗೂ ಜನ ಅನ್ನದ ತಟ್ಟೆಯನ್ನ ಇಟ್ಟುಕೊಂಡಿದ್ದಾರೆ.
ನಾಡ ದೇವತೆ ಚಾಮುಂಡೇಶ್ವರಿ ಅಶೀರ್ವಾದ ಪಡೆದು ಉತ್ತಮ ಮಳೆ ಆಗಲಿ ಅಂತಾ ಪ್ರಾರ್ಥನೆ ಮಾಡಿದ್ದೆವು,
ಮೋಡಕ್ಕೆ, ಪ್ರಕೃತಿಗೆ ಯಾವ ಪಕ್ಷ ಅಧಿಕಾರದಲ್ಲಿ ಇದೆ ಅನ್ನೋದು ಗೊತ್ತಿರಲ್ಲಾ,
ನಮ್ಮ ಹಾಗೂ ಜನರ ಪ್ರಾರ್ಥನೆಗೆ ಕಾವೇರಿ ತುಂಬಿ ಹರಿಯುತ್ತಿರೋದೆ ಸಾಕ್ಷಿ ಎಂದು ಮಾರ್ಮಿಕವಾಗಿ ನುಡಿದರು.

82 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯನ್ನ ಹೊಂದಿದ್ದೇವೆ,66 ಲಕ್ಷ ಹೆಕ್ಟೇರ್ ಬಿತ್ತನೆ ಈಗಾಗಲೇ ಆಗಿದೆ.
ಕಳೆದ ಬಾರಿ 223 ತಾಲೂಕಿನಲ್ಲೂ ಬರ ಇತ್ತು.
ಕಾಂಗ್ರೆಸ್ ಬಂದ್ರೆ ಬರ ಅಂತಾ ವಿರೋಧ ಪಕ್ಷದವರು ಟೀಕೆ ಮಾಡಿದ್ದರು.
ಟೀಕೆ ಸಾಯುತ್ತವೆ, ನಮ್ಮ ಕೆಲಸ ಉಳಿಯುತ್ತವೆ ಎಂದು ಟಾಂಗ್ ನೀಡಿದರು.

ನಾಲೆ ಶುದ್ದೀಕರಣ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ,ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರೈತರ ಬದುಕಿಗೆ, ಕೊನೆ ಹಳ್ಳಿಗಳಿಗೂ ನೀರು ತಲುಪಿಸುವ ನಿಟ್ಟಿನಲ್ಲಿ ಹೊಸ ಕಾನೂನು ತಂದಿದ್ದೇವೆ ಎಂದು ತಿಳಿಸಿದರು.

ನೀರು ಪಾಲು ನಿಗಧಿಯಾಗಿದೆ ಆ ನೀರು ತೆಗೆದುಕೊಂಡು ರೈತನ ಬದುಕು ಹಸನು ಮಾಡಬೇಕು,ರೈತನಿಗೆ ಪ್ರಮೋಷನ್, ಲಂಚ, ಸಂಬಳ ಯಾವುದೂ ಇರಲ್ಲಾ,
ನಾವು ರೈತನ ಉಳಿಸುವ ಕೆಲಸ ಮಾಡುತ್ತೇವೆ
ಈ ತಿಂಗಳ ಕೊನೆಗೆ ತಮಿಳುನಾಡಿಗೆ 40 ಟಿಎಂಸಿ ಬಿಡಬೇಕಿತ್ತು, ಈಗಾಗಲೇ 84 ಟಿಎಂಸಿ ಕಾವೇರಿ ಹರಿದಿದ್ದಾಳೆ, ನಮ್ಮ ಸ್ನೇಹಿತರು ಟೀಕೆ ಮಾಡುತ್ತಿದ್ದಾರೆ,ಮಾಡಲಿ,
ಮುಂದೆ ಇದೇ ರೀತಿ ಮಳೆ ಆಗಿ ರಾಜ್ಯದ, ತಮಿಳುನಾಡು ರೈತರಿಗೆ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಡಿಕೆಶಿ ಹೇಳಿದರು.

ಮೇಕೆದಾಟು ಒಂದು ಪರಿಹಾರವಾಗಲಿದೆ,
ಕಾವೇರಿ ಜಲಾನಯನ ಪ್ರದೇಶಕ್ಕೆ ನೀರನ್ನ ಕೊಡಲು ಹೋರಾಟ ಮಾಡಿದ್ದೆವು
ಸಂಕಲ್ಪ ಮಾಡಿದ್ದೆವು, ಜೈಲಿಗೆ ಹೋದರೂ ಚಿಂತೆ ಇಲ್ಲ ಅಂತಾ ಶಪಥ ಮಾಡಿದ್ದೆವು. ಮೇಕೆದಾಟುವಿನಿಂದ ತಮಿಳುನಾಡಿಗೆ ಅನುಕೂಲ, ನಮ್ಮ ಜನರಿಗೆ ಅಲ್ಲ
ನಮ್ಮ ಕಾಲಘಟ್ಟದಲ್ಲಿ ನ್ಯಾಯಾಲಯ ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡಲಿದೆ ಅಂತಾ ನಂಬಿದೇವೆ ಎಂದು ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.


Share this with Friends

Related Post