Mon. Dec 23rd, 2024

ಅಕ್ಷಯ ಗ್ರೂಪ್ಸ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

Share this with Friends

ಮೈಸೂರು,ಜು.26: ನಗರದ ಅಕ್ಷಯ ಗ್ರೂಪ್ಸ್ ವತಿಯಿಂದ 3ನೇ ಆಷಾಢ ಶುಕ್ರವಾರ ಪ್ರಯುಕ್ತ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಅನ್ನಪ್ರಸಾದ ವಿತರಿಸಿ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಸೈನಿಕರಿಗೆ ಗೌರವ ಸಲ್ಲಿಸಲಾಯಿತು.

ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಸದ್ವಿದ್ಯಾ ಕಾಲೇಜು ವೃತ್ತದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಇದೇ ವೇಳೆ 25ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಭಾರತದ ದ್ವಜ ಹಿಡಿದು ದೇಶ ಮತ್ತು ಸೈನಿಕರ ಪರವಾಗಿ ಘೋಷಣೆಗಳನ್ನು ಕೂಗಲಾಯಿತು.

ಈ ವೇಳೆ ಮಾತನಾಡಿದ ಮೂಡಾ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಶಕ್ತಿ, ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ಪರಿಚಯಿಸಲಾಯಿತು. ಇದರಲ್ಲಿ ಭಾರತ ಜಯಿಸುವ ಮೂಲಕ ಬಲಶಾಲಿ ರಾಷ್ಟ್ರ ಎಂಬುದನ್ನು ತೋರ್ಪಡಿಸಿದೆ ಎಂದು ಹೆಮ್ಮೆಯಿಂದ ಹೇಳಿದರು.

ಹಿರಿಯ ಸಮಾಜಸೇವಕ ಕೆ ರಘುರಾಮ್ ವಾಜಪೇಯಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಕ್ಷಯ ಗ್ರೂಪ್ಸ್ ಸಂಚಾಲಕರಾದ ಪರಮೇಶ್ ಗೌಡ, ಪ್ರಮೋದ್, ಸುರೇಂದ್ರ, ಸಂದೇಶ್, ಯೋಗೇಶ್, ಕಿರಣ್, ಕೃಷ್ಣ, ರವಿಚಂದ್ರ, ಶ್ರವಣ್, ಮಂಜುನಾಥ್, ಅಭಿ, ವಿನೋದ್, ಸಂದೀಪ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.


Share this with Friends

Related Post