Thu. Oct 31st, 2024

ರಾಜ್ಯದ ಹಲವಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ

Karnataka Lokayukta
Share this with Friends

ಬೆಂಗಳೂರು.ಮಾ.27​: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ರಾಜ್ಯದ ಹಲವಡೆ ದಾಳಿ ಮಾಡಿದ್ದಾರೆ. ರಾಜ್ಯದ 13 ಅಧಿಕಾರಿಗಳಿಗೆ ಸಂಬಂಧಿಸಿದಂತೆ 60 ಸ್ಥಳಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಬುಧವಾರ ಬೆಳ್ಳಂಬೆಳಗ್ಗೆ ಶಾಕ್‌ ನೀಡಿದ್ದಾರೆ.

ಬೆಂಗಳೂರು, ಬೀದರ್‌, ರಾಮನಗರ, ಉತ್ತರ ಕನ್ನಡ, ಉಡುಪಿ, ಕೊಡಗು, ಮೈಸೂರು ಮತ್ತು ವಿಜಯಪುರ ಜಿಲ್ಲೆಯಲ್ಲಿ ಲೋಕಾಯುಕ್ತ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ದಾಳಿಯಲ್ಲಿ 130ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಭಾಗವಹಿಸಿದ್ದು, 13 ಎಸ್‌ಪಿ, 12 ಡಿವೈಎಸ್‌ಪಿ, 25 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು ಭಾಗವಹಿಸಿದ್ದು, ರಾಜ್ಯಾದ್ಯಂತ ಶೋಧ ನಡೆಸುತ್ತಿದ್ದಾರೆ.

ದಾಳಿಗೊಳಗಾದ ಅಧಿಕಾರಿಗಳ ವಿವರ
ರಂಗನಾಥ್ ಎಸ್.ಪಿ – ಬಿಬಿಎಂಪಿಯ ಯಲಹಂಕ ಹಾಗೂ ಬ್ಯಾಟರಾಯನಪುರ ವಿಭಾಗದ ಚೀಫ್ ಇಂಜಿನಿಯರ್‌ಗೆ ಸಂಬಂಧಿಸಿದ ಬೆಂಗಳೂರಿನ 5 ಸ್ಥಳಗಳು
ರೂಪ – ಡೆಪ್ಯುಟಿ ಕಮಿಷನರ್, ಅಬಕಾರಿ ಇಲಾಖೆ – ಸಂಬಂಧಿತ ಉಡುಪಿಯ 5 ಸ್ಥಳಗಳು
ಪ್ರಕಾಶ್ – ಜ್ಯೂನಿಯರ್ ಇಂಜಿನಿಯರ್ – ಸಂಬಂಧಿಸಿದ ಕಾರವಾರ – ಉ.ಕ ಜಿಲ್ಲೆಯ 4 ಸ್ಥಳಗಳು
ಫಯಾಜ್ ಅಹಮದ್ – ಅಸಿಸ್ಟೆಂಟ್ ಇಂಜಿನಿಯರ್ – ಸಂಬಂಧಿಸಿದ ಮೈಸೂರಿನ 12 ಸ್ಥಳಗಳು
ಜಯಣ್ಣ ಬಿ.ವಿ. ಮುಖ್ಯ ಕಾರ್ಯಕಾರಿ ಅಭಿಯಂತರ, ಕೊಡಗು
ಮಹೇಶ್ ಚಂದ್ರಯ್ಯ ಹೀರೆಮಠ್- ಅರಣ್ಯ ವಲಯದ ಅಧಿಕಾರಿ- ಧಾರವಾಡದ 6 ಸ್ಥಳಗಳು
ಶಿವಕುಮಾರಸ್ವಾಮಿ- ಎಕ್ಸಿಕ್ಯೂಟಿವ್ ಇಂಜಿನಿಯರ್ ಬೀದರ್ ನ 4 ಸ್ಥಳಗಳು
ನಾಗರಾಜಪ್ಪ- ಅಸ್ಟಿಸೆಂಟ್ ಡೈರೆಕ್ಟರ್ ಕೋಲಾರದ ಐದು ಕಡೆಗಳಲ್ಲಿ
ಷಣ್ಮುಗಪ್ಪ, ಎಆರ್ ಟಿಓ ಜಮಖಂಡಿ, ಬಾಗಲಕೋಟೆ, ವಿಜಯಪುರದಲ್ಲಿ ದಾಳಿ
ಸದಾಶಿವಯ್ಯ, ಅಸ್ಟಿಸೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಿಕ್ಕಬಳ್ಳಾಪುರದ 6 ಕಡೆಗಳಲ್ಲಿ ದಾಳಿ
ಕೃಷ್ಣಗೌಡ- ದ್ವೀತಿಯ ದರ್ಜೆ ಸಹಾಯಕ ಲೆಕ್ಕಾಧಿಕಾರಿ, ಆಗಸನಪುರ ಗ್ರಾಮ ಪಂಚಾಯಿತಿ ಮಳವಳ್ಳಿ, ಮಂಡ್ಯ ನಾಲ್ಕು ಕಡೆಗಳಲ್ಲಿ ದಾಳಿ
ಸದಾಶಿವ ಜಯಪ್ಪ, ಸೆಕ್ರೆಟರಿ ಪಿಡಿಓ, ನಿಡಗುಂದಿ ಗ್ರಾಮ ಬೆಳಗಾವಿಯ 3 ಕಡೆಗಳಲ್ಲಿ ದಾಳಿ


Share this with Friends

Related Post