ಮೈಸೂರು,ಆ.12: ಮುಡಾದಲ್ಲಿ ನಡೆದಿರುವ ಕೋಟ್ಯಂತರ ರೂ ಹಗರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಡಿಸಿ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮುಡಾ ವಿಚಾರದಲ್ಲಿ ವಿಪಕ್ಷಗಳ ರಾಜಕೀಯ ಕೆಸರೆರಚಾಟ ನೋಡಿ ರಾಜ್ಯದ ಜನತೆಗೆ ಬೇಸರವಾಗಿದೆ, ರಾಜ್ಯ ಸರ್ಕಾರದ ವಾಲ್ಮೀಕಿ ಸಮುದಾಯದ ಹಗರಣ ಹಾಗೂ ಮುಡಾ ಹಗರಣ ರಾಜ್ಯದ ಜನರ ನಿದ್ದೆ ಕೆಡಿಸಿದೆ ಎಂದು ಕರ್ನಾಟಕ ಸೇನಾ ಪಡೆಯ ತೇಜೇಶ್ ಲೋಕೇಶ್ ಗೌಡ ಮತ್ತಿತರರು ಕಿಡಿಕಾರಿದರು.
ಇದು ರಾಜ್ಯದ ಅತಿ ದೊಡ್ಡ ಹಗರಣಗಳಲ್ಲಿ ಒಂದು. ಸುಮಾರು 80,000 ಜನರು ಮುಡಾ ಸೈಟ್ ಗಾಗಿ ಕಾದು ಕುಳಿತಿದ್ದಾರೆ, ಇತ್ತ ಸರ್ಕಾರ ಹಾಗೂ ಮುಡಾ ಅಧಿಕಾರಿಗಳು ಸೈಟ್ ಗಳನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಾಭಿವೃದ್ಧಿ ಸಚಿವರು ಮುಡಾ ಆಯುಕ್ತ ದಿನೇಶ್ ಕುಮಾರ್ ರನ್ನು ಅಮಾನತು ಮಾಡಿ, ವಿಚಾರಣೆಗೊಳಪಡಿಸದೆ, ವರ್ಗಾವಣೆ ಮಾಡಿ ಕಳಿಸಿರುವುದನ್ನು ಇದೇ ವೇಳೆ ಪ್ರತಿಭಟನಾಕಾರರು ಖಂಡಿಸಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ನೀರಾವರಿ ಯೋಜನೆಗಳು ಸಂಪೂರ್ಣ ವಿಫಲವಾಗಿವೆ ಹಾಗೂ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ದೂರಿದರು.
ಈಗಾಗಲೇ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿದ್ದಾರೆ. ಜೊತೆಗೆ ರಾಜ್ಯಪಾಲರು ಈ ಕೂಡಲೇ 5000 ಕೋಟಿ ಹಗರಣ ನಡೆದಿರುವ ಮೂಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು. ಸುರೇಶ್ ಗೋಲ್ಡ್, ಪ್ರಭುಶಂಕರ್ ಎಂಬಿ, ಶಿವಲಿಂಗಯ್ಯ, ಕುಮಾರ್ ಗೌಡ, ವರಕೂಡು ಕೃಷ್ಣೇಗೌಡ, ನಾಗರಾಜ್, ಮಂಜುಳಾ, ಪ್ರಜೀಶ್ ಪಿ, ಸಿಂದುವಳ್ಳಿ ಶಿವಕುಮಾರ್, ಭಾಗ್ಯಮ್ಮ ,ವಿ ಮಹದೇವ್ ಪಡುವಾರಳ್ಳಿ, ಗೀತಾಗೌಡ, ಬೋಗಾದಿ ಸಿದ್ದೇಗೌಡ,, ಡಾ. ರಾಮಕೃಷ್ಣೇಗೌಡ, ಬೇಬಿರತ್ನ ಜಾಧವ್, ಪ್ರದೀಪ, ರಾಧಾಕೃಷ್ಣ, ಹನುಮಂತಯ್ಯ, ಸುಬ್ಬೇಗೌಡ, ರಮೇಶ್, ರಘು ಅರಸ್, ಕೆ.ಸಿ ಗುರುಮಲ್ಲಪ್ಪ, ಕುಮಾರ್, ಗಣೇಶ್ ಪ್ರಸಾದ್, ಚಂದ್ರಶೇಖರ್, ಪ್ರಭಾಕರ್, ರವಿನಾಯಕ್, ವಿಷ್ಣು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.