Mon. Apr 7th, 2025

ಮಹಿಳೆಯ‌ ಐದು ಲಕ್ಷ ಬೆಲೆಯ ಸರ ದೋಚಿದ ಕತರ್ನಾಕ್ ಕಳ್ಳ

Share this with Friends

ಮೈಸೂರು, ಏ.27: ಪೊಲೀಸರು ಚುನಾವಣಾ ಕಾರ್ಯದಲ್ಲಿ ಬಿಜಿಯಾಗಿದ್ದರೆ ಇತ್ತ ಸರಗಳ್ಳ ಮಹಿಳೆಯೊಬ್ಬರ ಲಕ್ಷಾಂತರ ರೂ ಮೌಲ್ಯದ ಸರವನ್ನು ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕೆ ಆರ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿದ್ದು,130 ಗ್ರಾಂ ತೂಕದ ಎರಡೆಳೆ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾನೆ.

ಎರಡೆಳೆ ಚಿನ್ನದ ಸರದ ಮೌಲ್ಯ ಸುಮಾರು 5 ಲಕ್ಷ ರೂಗಳಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ಕೆಆರ್ ಪೊಲೀಸ್ ಠಾಣಾ ವ್ಯಾಪ್ತಿಯ ರೇಣುಕಾಚಾರ್ಯ ರಸ್ತೆಯಲ್ಲಿ ತ್ಯಾಗರಾಜ ರಸ್ತೆ ವಾಸಿ ರಾಮಾನುಜ ಅವರ ಪತ್ನಿ ಚಂಪಕವಲ್ಲಿ ಅವರು ನಡೆದು‌ ಹೋಗುತ್ತಿದ್ದಾಗ ಸರಗಳ್ಳ‌ ಆಕೆ ಧರಿಸಿದ್ದ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದಾನೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಚಂಪಕವಲ್ಲಿ ಅವರು ನೀಡಿದ ದೂರಿನ ಮೇರೆಗೆ ಕೆಆರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸರಗಳನ್ನ ಪತ್ತೆಗೆ ಬಲೆ ಬೀಸಿದ್ದಾರೆ.


Share this with Friends

Related Post