ಮೈಸೂರು, ಫೆ.12: ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ನಡೆಸುತ್ತಿರುವ ಕಾವೇರಿ ಕ್ರಿಯಾಸಮಿತಿ ಧರಣಿ ಸತ್ಯಾಗ್ರಹ 98ನೇ ದಿನಕ್ಕೆ ಕಾಲಿಟ್ಟಿದೆ.
ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ನಿರಂತರವಾಗಿ ನಡೆಸುತ್ತಿರುವ ಧರಣಿಯ ಭಾಗವಾಗಿ ಸಾರ್ವಜನಿಕ ರಿಂದ ಸಹಿ ಸಂಗ್ರಹ ಮಾಡಲಾಗುತ್ತಿದೆ
ಈ ವೇಳೆ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್ ಮಾತನಾಡಿ, ನಾಡಿನ ನೆಲ, ಜಲ, ಭಾಷೆ, ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿದೆ ಮತ್ತು ಕನ್ನಡಿಗರಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದರು.
ಪ್ರಧಾನ ಮಂತ್ರಿ ಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿ ಕಳೆದ 8 ದಿನಗಳಿಂದ ಸಾರ್ವಜನಿಕರ ಸಹಿ ಸಂಗ್ರಹ ಮಾಡಲಾಗುತ್ತಿದೆ, ಬೃಹತ್ ಸಹಿ ಸಂಗ್ರಹ ಅಭಿಯಾನಕ್ಕೆ ಜನರು ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಧರಣಿ ಸತ್ಯಾಗ್ರಹದಲ್ಲಿ ತೇಜೇಶ್ ಲೋಕೇಶ್ ಗೌಡ, ಕೃಷ್ಣಪ್ಪ ಸಿ.ಎಚ್, ಶಿವಕುಮಾರ್ ಸಿಂಧುವಳ್ಳಿ, ಮಹದೇವಸ್ವಾಮಿ, ವರಕೂಡು ಕೃಷ್ಣೆಗೌಡ್ರು, ಸಿಂದುವಳ್ಳಿ ಶಿವಕುಮಾರ್, ಶಿವಲಿಂಗಯ್ಯ, ಪುಷ್ಪವತಿ , ಮಂಜುಳಾ, ಪಿ. ಹನುಮಂತೇಗೌಡ, ಶಿವ ನಾಯ್ಕರ್, ಎಸ್. ಪುಷ್ಪಾವತಿ, ಕೆ ಎಲ್ ಪ್ರಭಾಕರ್,ನರಸಿಂಹೇ ಗೌಡ ಪಾಂಡವಪುರ , ನೇಹಾ, ಶ್ರೀ ಕೃಷ್ಣ, ಶುಭಶ್ರೀ, ನಂದೀಶ್ ಎಚ್ ಡಿ ಕೋಟೆ, ಕೆ ಮಂಜುಳಾ, ಪುಟ್ಟೇಗೌಡ ಬೋಗಾದಿ, ಮಂಜುಳಾ ಆರ್, ಕೃಷ್ಣಪ್ಪ, ಪ್ರಭಾಕರ ಮತ್ತಿತರರು ಭಾಗವಹಿಸಿದ್ದರು.