Thu. Dec 26th, 2024

ಸಾಲ ವಸೂಲಿಗೆ ಯುವಕನ ಅಪಹರಣ: ಏಳು ಮಂದಿ ಬಂಧನ

Share this with Friends

ಮೈಸೂರು,ಜು.17: ಸಾಲ ವಸೂಲಿ ಮಾಡಲು 30 ಮಂದಿ ಸೇರಿಕೊಂಡು ಯುವಕನನ್ನು ಕಿಡ್ನಾಪ್ ಮಾಡಿದ ಘಟನೆ ನಗರದ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ವಾಜಮಂಗಲ ನಿವಾಸಿ ದರ್ಶನ್(20) ಅಪಹರಣಕ್ಕೆ ಒಳಗಾದ ಯುವಕ.

ಪವನ್ ಹಾಗೂ ಆತನ‌ ಸ್ನೇಹಿತರು ಸೇರಿ ಸುಮಾರು 30 ಮಂದಿ
ಮಾರಕಾಸ್ತ್ರಗಳನ್ನ ತೋರಿಸಿ ಬಲವಂತವಾಗಿ ದರ್ಶನನ್ನು ಎಳೆದೊಯ್ದು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಕುವೆಂಪುನಗರ ಪೊಲೀಸರು ಪ್ರಮುಖ ಆರೋಪಿ ಸೇರಿದಂತೆ 7 ಮಂದಿಯನ್ನ ಬಂಧಿಸಿದ್ದಾರೆ.

ಜುಲೈ 13 ರಂದು ದರ್ಶನ್ ದಟ್ಟಗಳ್ಳಿಯ ಲೆಮೆನ್ ಟ್ರೀ ಹೋಟೆಲ್ ಬಳಿ ಇದ್ದಾಗ ಏಕಾಏಕಿ ಬಂದ ಪವನ್ ಹಾಗೂ 30 ಮಂದಿ ಬೆದರಿಸಿ ವಾಹನವೊಂದರಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ.

ಪವನ್ ನಿಂದ ದರ್ಶನ್ ಸಾಲ ಪಡೆದಿದ್ದ, ಸಮಯಕ್ಕೆ ಸರಿಯಾಗಿ ದರ್ಶನ್ ಹಣ ಹಿಂದಿರುಗಿಸಿಲ್ಲ.ಇದೇ ವಿಚಾರದಲ್ಲಿ ಪವನ್ ತನ್ನ ಸ್ನೇಹಿತರ ಜೊತೆ ಸೇರಿ ದರ್ಶನ್ ನನ್ನು ಬಲವಂತವಾಗಿ ಕರೆದೊಯ್ದು ಹಿಂಸೆ ನೀಡಿದ್ದಾರೆ.

ಸುಮಾರು ‌3 ಗಂಟೆಗಳ ನಂತರ ದರ್ಶನ್ ತಪ್ಪಿಸಿಕೊಂಡು ಬಂದಿದ್ದಾನೆ.ಈ ವಿಚಾರ ಮನೆಯಲ್ಲಿ ಹೇಳಿದರೆ ಕೊಲೆ ಮಾಡುವುದಾಗಿ ಪವನ್ ಎಚ್ಚರಿಕೆ ನೀಡಿದ್ದ.

ಈ ಸಂಬಂಧ ದರ್ಶನ್ ತಂದೆ ಉಮೇಶ್ ಕುವೆಂಪುನಗರ ಠಾಣೆಗೆ ದೂರು ನೀಡಿದ್ದು, ಪವನ್ ಸೇರಿದಂತೆ 7 ಮಂದಿಯನ್ನ ಕುವೆಂಪುನಗರ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.


Share this with Friends

Related Post