Sun. Dec 22nd, 2024

ಶ್ರೀಚಾಮರಾಜೆಂದ್ರ (ಕಬ್ಬನ್) ಉದ್ಯಾನವನದ ಜವಾಹರ್ ಬಾಲಭವನದಲ್ಲಿ ನ.15ರಿಂದ ಚಿಣ್ಣರ ಮೇಳ ಅಯೋಜನೆ

Share this with Friends

ಬೆಂಗಳೂರು, ನ.05 : ಜವಾಹರ್ ಲಾಲ್ ಬಾಲ ಭವನ ಸಂಯುಕ್ತಾಶ್ರಯದಲ್ಲಿ ಚಿಣ್ಣರ ಉತ್ಸವ ಎಂಬ ಗ್ರಾಹಕರ ಮೇಳ ನ.15,16 ಮತ್ತು 17 ರಂದು ನಗರದ ಕಸ್ತೂರು ಬಾ ರಸ್ತೆಯ ಶ್ರೀಚಾಮರಾಜೆಂದ್ರ (ಕಬ್ಬನ್) ಉದ್ಯಾನವನದ ಜವಹರ್ ಬಾಲಭವನದಲ್ಲಿ ಅಯೋಜಿಸಲಾಗಿದೆ.

ಶುಕ್ರವಾರದಿಂದ ಭಾನುವಾರದವರೆಗಿನ ಈ 3 ದಿನಗಳ ಕಾಲ ನಡೆಯುವ ಚಿಣ್ಣರ ಮೇಳದಲ್ಲಿ ಸಾಕು ಪ್ರಾಣಿ, ಪಕ್ಷಿಗಳ ಪ್ರದರ್ಶನ, ಮನೋರಂಜನೆ, ಹಾಡು, ಸಂಗೀತ, ಮ್ಯಾಜಿಕ್ ಶೋ, ಪುಟಾಣಿ ಮಕ್ಕಳಿಗಾಗಿ ಸ್ಪರ್ಧೆಗಳು, ಗ್ರಾಹಕರ ಮೇಳ ಮತ್ತು ಚಿತ್ರಕಲೆ ಇನ್ನೂ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.

ನೊಂದಣಿ ಮತ್ತು ಭಾಗವಹಿಸುವಿಕೆಗಾಗಿ ತೇಜಸ್ವಿ ಬಿ.ಟಿ (9480129766) ಸಂಪರ್ಕಿಸಿ.


Share this with Friends

Related Post