Mon. Dec 23rd, 2024

ವಿದ್ಯಾರ್ಥಿನಿಯರ ಹತ್ಯೆ: ಸರ್ಕಾರ ಗಂಭೀರವಾಗಿಪರಿಗಣಿಸಲಿ-ಬಸವಯೋಗಿಪ್ರಭುಗಳು

Share this with Friends

ಚಿಕ್ಕಮಗಳೂರು,ಏ.20: ನಾಡಿನಲ್ಲಿ ನಡೆಯುತ್ತಿರುವ ವಿದ್ಯಾರ್ಥಿನಿಯರ ಹತ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ನರಸಿಂಹರಾಜಪುರ ಬಸವಕೇಂದ್ರದ ಶ್ರೀ ಬಸವಯೋಗಿಪ್ರಭುಗಳು ಆಗ್ರಹಿಸಿದ್ದಾರೆ.

ಮಾನವೀಯತೆ ಇಲ್ಲದವರು ಮಾತ್ರ ಹಂತಕರಾಗುತ್ತಾರೆ,ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಡನೀಯ ಎಂದು ಅವರು ಹೇಳಿದ್ದಾರೆ.

ಕೊಲೆ ಮಾಡಿದವನಿಗೆ ಉಗ್ರ ಶಿಕ್ಷೆಯಾಗಬೇಕು,ಹಗಲಿನಲ್ಲೇ ಹತ್ಯೆಗಳು ನಡೆಯುತ್ತಿವೆ,ಸರ್ಕಾರ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಶ್ರೀ ಬಸವಯೋಗಿಪ್ರಭುಗಳು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳು ಕಾಲೇಜ್ ಗೆ ಶಿಕ್ಷಣ ಕಲಿಯಲು ಹೋಗಬೇಕೇ ವಿನಃ ಲವ್ ಜಿಹಾದ್ ನಂತಹ ಕೃತ್ಯಕ್ಕೆ ಬಲಿಯಾಗಿ ಹೆತ್ತವರಿಗೆ ನೋವನ್ನು ಕೊಡಬಾರದು ಎಂದು ಶ್ರೀಗಳು ಸಲಹೆ ನೀಡಿದ್ದಾರೆ.


Share this with Friends

Related Post