Tue. Dec 24th, 2024

ಪಾಲಾರ್ ಚೆಕ್‍ಪೋಸ್ಟ್ ಬಳಿ ದಾಖಲೆ ಇಲ್ಲದ ಲಕ್ಷಾಂತರ ಹಣ ವಶ

Share this with Friends

ಚಾಮರಾಜನಗರ,ಮಾ.23: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹನೂರು ಸಮೀಪ ಪಾಲಾರ್ ಚೆಕ್‍ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 271670 ರೂಗಳನ್ನು ಎಫ್.ಎಸ್.ಟಿ ತಂಡ ವಶಪಡಿಸಿಕೊಂಡಿದೆ.

ಪಾಲಾರ್ ಚೆಕ್‍ಪೋಸ್ಟ್ ಬಳಿ ಬೊಲೆರೋ ವಾಹನದಲ್ಲಿ ಶಿವಮೂರ್ತಿ ಎಂಬುವವರಿಂದ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ 2,71,670 ರೂ. ಗಳನ್ನು ಎಫ್.ಎಸ್.ಟಿ ಅಧಿಕಾರಿ ಶಾಂತರಾಜು, ಸಬ್‍ ಇನ್ಸ್‌ಪೆಕ್ಟರ್ ಜಯರಾಮ್ ಮತ್ತು ಸಿಬ್ಬಂದಿ ಜಪ್ತಿ ಮಾಡಿದ್ದಾರೆ.

ಹಣ ಸಾಗಣೆ ಮಾಡುತ್ತಿದ್ದ ಬಗ್ಗೆ ವಿಚಾರಣೆ ಮಾಡಿದ ವೇಳೆ ಸಮಂಜಸ ಉತ್ತರ ದೊರೆಯದ ಕಾರಣ ಹಣ ವಶಕ್ಕೆ ಪಡೆದು ಕೊಳ್ಳೇಗಾಲದ ಉಪ ಖಜಾನೆಯಲ್ಲಿ ಇರಿಸಲಾಗಿದೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.


Share this with Friends

Related Post