ಹುಣಸೂರು,ಏ.14: ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಮಾಜಿ ಶಾಸಕ ಹೆಚ್.ಪಿ ಮಂಜುನಾಥ್ ಜತೆ ಭರ್ಜರಿ ಮತ ಪ್ರಚಾರ ನಡೆಸಿದರು.
ಲಕ್ಷ್ಮಣರವರನ್ನು ನೋಡುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ದಾವಿಸಿ ಬಂದು ಕೈ ಮುಗಿದು ತಮ್ಮ ಕಷ್ಟ ಹೇಳಿಕೊಂಡರು.
ಹಿಂದೆ ಇದ್ದ ಸಂಸದರು ನಮ್ಮ ಕ್ಷೇತ್ರಕ್ಕೆ ಬಂದಿಲ್ಲ,10 ವರ್ಷಗಳ ಕಾಲ ಜನ ಪ್ರತಿನಿಧಿ ಯಾಗಿದ್ದರು ಆದರೆ ಜನಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಬಗೆ ಹರಿಸುವ ಕೆಲಸವನ್ನು ಮಾಡಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಿಮ್ಮನ್ನು ಗುರುತಿಸಿದೆ,ಅದು ಬಡವರ ಪಕ್ಷ, ನಿಮ್ಮ ಗ್ಯಾರಂಟಿ ಯೋಜನೆಗಳಿಂದ ನಾವೆಲ್ಲ ಬದುಕು ನಡೆಸುತ್ತಿದ್ದೇವೆ,ಈ ಬಾರಿ ನಿಮಗೆ ಅವಕಾಶ ಕೊಡುತ್ತೇವೆ ನಮ್ಮ ಕಷ್ಟ ಗಳಿಗೆ ನೀವು ಪರಿಹಾರ ನೀಡುವಿರಿ ಎಂಬ ಬಲವಾದ ನಂಬಿಕೆ ಇದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಹೆಚ್. ಪಿ ಮಂಜುನಾಥ್ ಮಾತನಾಡಿ, ತಮ್ಮ ಅಭ್ಯರ್ಥಿ ಲಕ್ಷ್ಮಣ ನಮ್ಮ ಕ್ಷೇತ್ರಕ್ಕೆ ಮಾತಕೇಳಿಕೊಂಡು ಬಂದಿದ್ದಾರೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ಉಪಯೋಗ ವಾಗುತ್ತಿದೆ, ನೀವು ಒಂದು ಬಾರಿ ಕರುಣೆ ತೋರಿದರೆ ನಮ್ಮ ಅಭ್ಯರ್ಥಿ ನಿಮ್ಮೆಲ್ಲರ ಪರ ಸಂಸತ್ತಿನಲ್ಲಿ ಧ್ವನಿ ಎತ್ತುತ್ತಾರೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಎಂ ಲಕ್ಷ್ಮಣ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ರೈತರು ಜೀವನ ಮಾಡುವುದು ಕಷ್ಟ ವಾಗಿದೆ ಏಕೆಂದರೆ ಕೃಷಿ ಬಳಕೆಯ ವಸ್ತುಗಳ ಬೆಲೆಗೆ ಜಿ ಎಸ್ ಟಿ ಎಂಬ ಭೂತ ಆವರಿಸಿದೆ ಪಾಪ ರೈತರು ಬೆಳೆಯುವ ಬೆಳೆಗೆ ತಕ್ಕ ಬೆಲೆ ಇಲ್ಲ ಇಂತಹ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ನನಗೆ ಒಂದು ಅವಕಾಶ ನೀಡಿದರೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ, ನಾನು ಜನ ಸಾಮಾನ್ಯ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ, ನಮ್ಮ ಸಿಎಂ ಮತ್ತು ಡಿಸಿಎಂ ನನ್ನನು ಗುರುತಿಸಿದ್ದಾರೆ. ನಾನು ನಿಮ್ಮಂತಹ ಮಧ್ಯಮ ವರ್ಗದಲ್ಲಿ ಬೆಳೆದಿರುವ ವ್ಯಕ್ತಿ ಹಾಗಾಗಿ ನನಗೆ ನಿಮ್ಮ ಕಷ್ಟ ಗೊತ್ತು ಅದನ್ನು ಅರಿತಿರುವ ಕಾರಣ ಅದನ್ನು ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಹುಣಸೂರಿನ ಮತ ಬಾಂಧವರು ನನಗೆ ಬೆಂಬಲ ನೀಡಿದರೆ ನಿಮ್ಮ ಕ್ಷೇತ್ರದ ಅನುಧಾನದ ಬಗ್ಗೆ ನಾನು ಸಂಸತ್ತಿನಲ್ಲಿ ಮಾತನಾಡುತ್ತೇನೆ, ಹೆಚ್.ಪಿ ಮಂಜುನಾಥರ ಗುಣ ನೋಡಿ ಇಷ್ಟೊಂದು ಜನ ಬಂದಿದ್ದೀರಾ ನನಗೆ ಬೆಂಬಲ ನೀಡುತ್ತಿದ್ದೀರಾ 26 ರಂದು ಮರೆಯದೆ ಮತ ಚಲಾಯಿಸಿ ಅದು ನಿಮ್ಮ ಹಕ್ಕು ಅದನ್ನು ಮಾರಿಕೊಳ್ಳುವ ಕೆಲಸಕ್ಕೆ ದಯಮಾಡಿ ಯಾರು ಮುಂದಾಗಬೇಡಿ ಎಂದು ಮನವಿ ಮಾಡಿದರು.