Mon. Dec 23rd, 2024

ಅಡ್ಡಾದಿಡ್ಡಿ ಓಡಿ ಆತಂಕ ತಂದ ಲಕ್ಷ್ಮೀ‌

Share this with Friends

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ ದಸರಾದಲ್ಲಿ ಬಂದಿರುವ ಲಕ್ಷ್ಮಿ ಆನೆ ಇದ್ದಕ್ಕಿದ್ದಂತೆ‌ ಅಡ್ಡಾದಿಡ್ಡಿ ಓಡಾಡತೊಡಗಿ ಜನಸಾಮಾನ್ಯರು ಆತಂಕ ಗೊಳ್ಳುವಂತೆ ಮಾಡಿತು.

ಲಕ್ಷ್ಮಿ ಜನರಿಗೆ ಹೊಂದಿಕೊಳ್ಳಲಿ ಎಂಬ ಕಾರಣಕ್ಕೆ ಮಾವುತ ಬಿಗಿ ಭದ್ರತೆಯಲ್ಲಿ ಕರೆತರುತ್ತಿದ್ದರು.

ಆಗ ಲಕ್ಷ್ಮೀ ಇದ್ದಕ್ಕಿದ್ದಂತೆ ಮನಬಂದ ಕಡೆ ಓಡತೊಡಗಿತು.ಇದ ಕಂಡು ಜನ‌ ಆತಂಕಗೊಂಡು ಅತ್ತ,ಇತ್ತ ಓಡಿದರು.

ಅಂಗಡಿ ಮುಂಗಟ್ಟಿನವರು,ರಸ್ತೆ‌ ಬದಿ ವ್ಯಾಪಾರಿಗಳು,ಅಲ್ಲಿದ್ದ ಮಹಿಳೆಯರು ‌ಮತ್ತಿತರರು ಓಡಿ ಪ್ರಾಣಾಪಾಯದಿಂದ ಪಾರಾದರು.

ಲಕ್ಷ್ಮಿಯ ಮೇಲೆ ಕುಳಿತಿದ್ದ ಮಾವುತ ಸಮಾಧಾನ ಪಡಿಸಲು ಸತತ ಪ್ರಯತ್ನ ಮಾಡಿದರು.ತಕ್ಷಣ ಇತರೆ ಮಾವುತರು ಕಾವಾಡಿಗರು ಪೊಲೀಸರು ಹಿಂದೆಯೇ ಓಡಿ ಆನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.

ನಂತರ ಲಕ್ಷ್ಮಿ ಆನೆಯನ್ನು ಶ್ರೀರಂಗಪಟ್ಟಣದ ಬನ್ನಿಮಂಟಪಕ್ಕೆ ಕರೆದೊಯ್ಯಲಾಯಿತು.


Share this with Friends

Related Post