Sun. Dec 22nd, 2024

ಚಿರತೆ ದಾಳಿ:10 ಮೇಕೆಗಳು ಬಲಿ ಗ್ರಾಮಸ್ಥರಲ್ಲಿ ಆತಂಕ

Share this with Friends

ಮೈಸೂರು: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಧನಗಳ್ಳಿಯಲ್ಲಿ
ಚಿರತೆ ದಾಳಿ ಮಾಡಿ 10 ಮಡಕೆಗಳನ್ನು ಕೊಂದಿದ್ದು ಗ್ರಾಮಸ್ಥರಲ್ಲಿ ಭಯ ಆವರಿಸಿದೆ.

ಧನಗಳ್ಳಿ ಗ್ರಾಮದ ರೈತ ಬಸವರಾಜು ಎಂಬುವರಿಗೆ ಸೇರಿದ ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿವೆ.

ಮೇಕೆ ಸಾಕಾಣಿಕೆಯಿಂದಲೇ ಜೀವನ ಸಾಗಿಸುತ್ತಿದ್ದ ಬಸವರಾಜು ಚಿಂತಾಕ್ರಾಂತರಾಗಿದ್ದಾರೆ.

ಎಂದಿನಂತೆ ಗ್ರಾಮದ ಸಮೀಪದ ಕೆಎಚ್‌ಬಿ ಕಾಲೋನಿ ಬಳಿ ಮೇಕೆಗಳನ್ನು ಮೇಯಲು ಬಿಡಲಾಗಿತ್ತು.ಬಸವರಾಜು ಅವರು
ಸಂಜೆ ಮನೆಗೆ ಮೇಕೆಗಳನ್ನು ಕರೆದೊಯ್ಯಲು ಬಂದಾಗ ಏಳು ಮೇಕೆಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದು ಗೊತ್ತಾಗಿದೆ.

ಉಳಿದ ಮೂರು ಮೇಕೆಗಳನ್ನ ಚಿರತೆ ಹೊತ್ತೊಯ್ದಿದೆ ಎಂದು ಬಸವರಾಜು ಅಳಲು ತೋಡಿಕೊಂಡಿದ್ದಾರೆ.

ಚಿರತೆ ದಾಳಿ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು,
ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಪರಿಶೀಲಿಸಿದರು. ಚಿರತೆ ಹಿಡಿಯಲು ಬೋನ್ ಇಡಲು ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.

ಮೇಕೆಗಳನ್ನು ಕಳೆದುಕೊಂಡ ಬಸವರಾಜುಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು,
ಸಂಕಷ್ಟಕ್ಕೆ ಸಿಲುಕಿರುವ ಅವರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


Share this with Friends

Related Post