Fri. Apr 18th, 2025

ಸಿಎಂ ಬಿಟ್ಟು ಎಲ್ಲರನ್ನು ಡಿಸಿಎಂ ಮಾಡಲಿ :ಹೇಮಾ ನಂದೀಶ್ ವ್ಯಂಗ್ಯ

Share this with Friends

ಮೈಸೂರು,ಜೂ.26: ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನ ಬಿಟ್ಟು ಎಲ್ಲ ಸಚಿವರನ್ನು ಡಿಸಿಎಂ ಮಾಡಲಿ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ವ್ಯಂಗ್ಯವಾಡಿದ್ದಾರೆ.

ಏಕೆಂದರೆ ಕಾಂಗ್ರೆಸ್ ನಲ್ಲಿ ಸಮುದಾಯಕ್ಕೊಂದು ಉಪ ಮುಖ್ಯ ಮಂತ್ರಿ ಸ್ಥಾನದ‌ ಬೇಡಿಕೆ ಇದೆ‌ ಅದಕ್ಕಾಗಿ ಎಲ್ಲ ಸಚಿವರಿಗೂ ಡಿಸಿಎಂ ಮಾಡಲಿ ಎಂದು ಕಾಲೆಳೆದಿದ್ದಾರೆ.

ಲೋಕಸಭಾ ಚುನಾವಣೆ ಮುಗಿಯುವವರೆಗೂ ಬೆಲೆ ಏರಿಕೆ‌ ಮಾಡದೆ,ಈಗ ನಿರಂತರವಾಗಿ ಪ್ರತಿಯೊಂದರ ಬೆಲೆ ಏರಿಕೆ ಮಾಡಲಾಗುತ್ತಿದೆ ಇದು ‌ಜನ ವಿರೋಧಿ ಸರ್ಕಾರ ಎಂದು ಕಿಡಿಕಾರಿದ್ದಾರೆ.

ಗ್ಯಾರಂಟಿ ಎಂದು ಹೇಳಿಕೊಂಡು ಅಧಿಕಾರಕ್ಕೆ‌ ಬಂದು ಪ್ರತಿಯೊಂದರ ಬೆಲೆ ಏರಿಕೆ‌ ಮಾಡಿದರೆ‌ ಜನ ಸಾಮಾನ್ಯರು ಬದುಕುವುದು ಹೇಗೆ‌ ಎಂದು ಹೇಮಾ ಕಾರವಾಗಿ ಪ್ರಶ್ನಿಸಿದ್ದಾರೆ.


Share this with Friends

Related Post