ಮೈಸೂರು,ಏ.19: ರಾಹುಲ್ ಗಾಂಧಿ ಅವರು, ಗ್ಯಾರಂಟಿ ಹೊರತಾಗಿ ರಾಜ್ಯದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಬೇಕು ಎಂದು ಬಿಜೆಪಿ ಮುಖಂಡ ಮೈ.ಕ ಪ್ರೇಮ್ ಕುಮಾರ್ ಆಗ್ರಹಿಸಿದರು.
ನಗರದ ದೇವರಾಜ ಮಾರ್ಕೆಟ್ ಹಾಗೂ ಮನ್ನಾರ್ಸ್ ಮಾರ್ಕೆಟ್ ಮತ್ತು ಕೆ ಟಿ ಸ್ಟ್ರೀಟ್ ಅಂಗಡಿ ಮುಂಗಟುಗಳಿಗೆ ತೆರಳಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಕೇಂದ್ರ ಸರ್ಕಾರದ ಸಾಧನೆಯ ಕರಪತ್ರ ಅಂಚಿ ಬಿರುಸಿನ ಮತಯಾಚನೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 11 ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಇದರ ಕಾರಣವನ್ನು ರಾಹುಲ್ ಗಾಂಧಿ ಜನರ ಮುಂದಿಡಲಿ ಎಂದು ಆಗ್ರಹಿಸಿದರು.
ಶಾಸಕರ ನಿಧಿಯ ಹಣ ಬಿಡುಗಡೆ ಯಾಗಿಲ್ಲ, ಹಣಕಾಸು ಹೊಂದಾಣಿಕೆಗೆ ಪರದಾಡುತ್ತಿರುವ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಹಂತ ತಲುಪಿದೆಯೇ ಎಂದು ಪ್ರಶ್ನಿಸಿದರು.
ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದಿದ್ದ ಕಾಂಗ್ರೆಸ್ ಈಗ ಚುನಾವಣೆಯ ವೇಳೆ ರಾಮನಾಮ ಜಪಿಸುತ್ತಿದೆ ಎಂದು ಟೀಕಿಸಿದ ಅವರು, ನಕ್ಸಲ್ ಚಟುವಟಿಕೆ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಆರ್ ಪರಮೇಶ, ಸುರೇಂದ್ರ ಕಿರಣ್, ಪ್ರಮೋದ್, ಲಕ್ಷ್ಮಿ, ಸುನಿಲ್ ಪೈ, ಆನಂತರಾಯ ಪೈ, ಕೃಷ್ಣ, ಕುಮಾರ್, ಸಂತೋಷ್, ಇಂದ್ರಕುಮಾರ್ ಮುಂತಾದವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.