Sat. Nov 2nd, 2024

ದಸರಾ ವಸ್ತುಪ್ರದರ್ಶನದಲ್ಲಿ ವರ್ಷವಿಡೀಸಾಂಸ್ಕೃತಿಕ ಚಟುವಟಿಕೆ ಇರಲಿ:ರಘುರಾಂ

Share this with Friends

ಮೈಸೂರು, ಆ.12: ಮೈಸೂರಿನಲ್ಲಿ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಲು ದಸರಾ ವಸ್ತು ಪ್ರದರ್ಶನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನ ವರ್ಷಪೂರ್ತಿ ಆಯೋಜಿಸಬೇಕೆಂದು ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಅವರು ಸಲಹೆ ನೀಡಿದರು.

ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದಲ್ಲಿರುವ ಕರ್ನಾಟಕ 50ರ ಸಂಭ್ರಮ ಸಾಂಸ್ಕೃತಿಕ ವೇದಿಕೆಯಲ್ಲಿ ದಾಸವಾಣಿ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಕಲಾಕ್ಷೇತ್ರದಲ್ಲಿ ತನ್ನದೆ ಆದ ಹಿನ್ನೆಲೆ ಇದೆ. ಮೈಸೂರು ಅನಂತಸ್ವಾಮಿ ಶಿವಮೊಗ್ಗ ಸುಬ್ಬಣ್ಣ ಅವರ ಸುಗಮಸಂಗೀತ, ವರನಟ ಡಾ. ರಾಜಕುಮಾರ್, ಪಿಬಿಎಸ್, ಎಸ್.ಪಿಬಿ ರವರ ಚಿತ್ರಗೀತೆಗಳ ಕಾರ್ಯಕ್ರಮ, ಮಾಸ್ಟರ್ ಹಿರಣಯ್ಯ ರವರ ನಾಟಕ, ಚಾಮರಾಜನಗರ ನಂಜನಗೂಡು ಕಲಾವಿದರ ಜಾನಪದ ಕಲಾವಿದರ ಪ್ರದರ್ಶನ, ಭರತನಾಟ್ಯ, ನೃತ್ಯರೂಪಕ, ಗಝಲ್ ಹೀಗೆ ಹಲವಾರು ಕಲಾಪ್ರಕಾರಗಳು, ಜನಮಾನಸದಲ್ಲಿ ಬೇರೂರಿದೆ ಎಂದು ತಿಳಿಸಿದರು

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತ್ಯಾಗರಾಜರು ಭಕ್ತ ಕನಕದಾಸರು, ಪುರಂದರದಾಸರ ದಾಸವಾಣಿ ಪ್ರದರ್ಶನಕ್ಕೆ ಸಾವಿರಾರು ಮಹಿಳಾ ಕಲಾವಿದರನ್ನ ಸಂಘಟಿಸಬಹುದು ಹಾಗಾಗಿ ದಾಸವಾಣಿ ಸಮಾವೇಶಗಳನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಲು ಮುಂದಗಾಲಿ ಎಂದು ರಘುರಾಮ್‌ ವಾಜಪೇಯಿ ಮನವಿ ಮಾಡಿದರು.

ಇದೇ ವೇಳೆ ಚಾಮುಂಡಿಪುರಂ ಬಡಾವಣೆಯ ಶ್ರೀನಿಧಿ ಭಜನಾ ಮಂಡಳಿ ವತಿಯಿಂದ ದಾಸವಾಣಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಸಂಭ್ರಮ ವ್ಯವಸ್ಥಾಪಕ ಕೃಷ್ಣ, ಶ್ರೀನಿಧಿ ಭಜನಾ ಮಂಡಳಿ ಅಧ್ಯಕ್ಷೆ ಪ್ರಭಾ, ಸುಜಾತ, ಸುಧಾ, ಅಂಬಿಕಾ, ಅರ್ಪಿತಾ, ಸುಧಾ ಬಾಲಕೃಷ್ಣ, ರೂಪಾ, ನೇತ್ರ ಮತ್ತಿತರರು ಹಾಜರಿದ್ದರು.


Share this with Friends

Related Post