Sat. Nov 2nd, 2024

ಮಹಿಳೆಯರ ಸಬಲೀಕರಣದ ಯೋಜನೆಗಳು ಎಲ್ಲಾ ಸ್ತ್ರೀಯರಿಗೂ ತಲುಪಲಿ

Share this with Friends

ಮೈಸೂರು,ಮಾ.4: ಪ್ರಧಾನಿ ಮೋದಿಯವರು ಮಹಿಳೆಯರ ಸಬಲೀಕರಿಕ್ಕಾಗಿ ಕೈಗೊಂಡಿರುವ ಯೋಜನೆಗಳನ್ನು ಎಲ್ಲಾ ಸ್ತ್ರೀಯರಿಗೂ ಮುಟ್ಟಿಸುವ ಕೆಲಸವಾಗಬೇಕು ಎಂದು ಬಿಜೆಪಿ ನಗರ ಅಧ್ಯಕ್ಷ ಎಲ್ ನಾಗೇಂದ್ರ ಕರೆ ನೀಡಿದರು.

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಮ್ಯಾರಥಾನ್ ಉದ್ಘಾಟಿಸಿ ಮಾತನಾಡಿದಾವರು,ಮೋದಿ ಅವರ ಹಲವಾರು ಯೋಜನೆಗಳು ಸ್ವ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಲಿದೆ, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು
ಈ‌ ಬಗ್ಗೆ ಪ್ರತಿ ಮಹಿಳೆಯರಿಗೂ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.

ಮೈಸೂರಿನ ನ್ಯಾಯಾಲಯದ ಮುಂಭಾಗದಿಂದ ಎಂ ಜಿ ರಸ್ತೆ , ಆರ್ ಟಿ ಒ, ರಾಮಸ್ವಾಮಿ ವೃತ್ತ,ಬಿಜೆಪಿ ಕಚೇರಿ ಮುಂಭಾಗದ ವರೆಗೆ ಮ್ಯಾರಥಾನ್ ಸಾಗಿತು. ನಾರಿ ಶಕ್ತಿ ಕಾರ್ಯಕ್ರಮದ ಅಡಿಯಲ್ಲಿ ರನ್ ಫಾರ್ ನೇಷನ್, ರನ್ ಫಾರ್ ಮೋದಿ ಎಂಬ ಘೋಷಣೆ ಕೂಗುತ್ತಾ ಮ್ಯಾರಥಾನ್ ಸಾಗಿತು.

ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ನಾರಿ ಶಕ್ತಿ ವಂದನ ಮೂಲಕ ಪ್ರತಿ ರಾಜ್ಯದಲ್ಲಿನ ಸ್ವಸಹಾಯ ಸಂಘಗಳಿಗೆ ನಗರ ಮತ್ತು ಗ್ರಾಮೀಣ ಭಾಗದ ಸ್ತ್ರೀಯರಿಗೆ ಕೇಂದ್ರದ ಹಲವಾರು ಯೋಜನೆಗಳನ್ನು ತಲುಪಿಸುವುದು ಹಾಗೂ ತಿಳುವಳಿಕೆ ಹೇಳುವ ಕಾರ್ಯಕ್ರಮವಾಗಿದೆ.

ಶಾಸಕರಾದ ಟಿ ಎಸ್ ಶ್ರೀವತ್ಸ, ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್, ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಎಚ್‌.ಜಿ ಗಿರಿಧರ್, ಕೇಬಲ್ ಮಹೇಶ್, ಬಿ. ಎಮ್ ರಘು, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಮಮತಾ ಶೆಟ್ಟಿ, ಮಹಿಳಾ ವಿಭಾಗದ ಪ್ರಭಾರಿ ಹೇಮ ನಂದೀಶ್, ಮಾಜಿ ಉಪ ಮೇಯರ್ ಡಾ. ರೂಪ, ಮಾಜಿನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಲಕ್ಷ್ಮಿ ಕಿರಣ್ ಗೌಡ, ಸೌಭಾಗ್ಯ ಮೂರ್ತಿ, ಅಲ್ಪಸಂಖ್ಯಾತ ಮೋರ್ಚ ರಾಜ್ಯಾಧ್ಯಕ್ಷರಾದ ಡಾಕ್ಟರ್ ಅನಿಲ್ ಥಾಮಸ್, ಎನ್ ವಿ ಪನೀಶ್, ಹೇಮಂತ್ ಕುಮಾರ್ ಗೌಡ, ಜಯಪ್ರಕಾಶ್ ಗೌಡ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.


Share this with Friends

Related Post