ನವದೆಹಲಿ,ಜೂ.4: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ದಾಖಲಾಗಿದ್ದು ಕೇಸರಿ ಪಡೆಯೇ ಒಂದು ರೀತಿ ಶಾಕ್ ಗೆ ಒಳಗಾಗಿದೆ.
ಒಟ್ಟು 543 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್ ಡಿಎ 291 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್ ನೇತೃತ್ವದ ಐಎನ್ ಡಿ ಐಎ ಪುಟಿದೆದಿದ್ದು 234 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಈ ಬಾರಿ ಚುನಾವಣೋತ್ತರ ಸಮೀಕ್ಷೆಗಳು ಹುಸಿಯಾಗಿವೆ.ಬಿಜೆಪಿ ಸ್ವಂತ ಬಲದಲ್ಲೇ ಅಧಿಕಾರ ಹಿಡಿಯುವಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದವು.ಆದರೆ ಬಿಜೆಪಿ ಎಡವಿದೆ, ಯಾವುದೇ ಪಕ್ಷಕ್ಕೂ ನಿಚ್ಚಳ ಬಹುಮತ ಬರಲೇ ಇಲ್ಲ.
ಆಂದ್ರದ ಚಂದ್ರಬಾಬು ನಾಯ್ಡು ಈ ಬಾರಿ ಕಿಂಗ್ ಮೇಕರ್ ಆಗಲಿದ್ದಾರೆ ಹಾಗಾಗಿ ಬಿಜೆಪಿ ಹಾಗೂ ಕಾಂಗ್ರಸ್ ಮಿತ್ರ ಪಕ್ಷಗಳು ನಾಯ್ಡುಗೆ ಗಾಳ ಹಾಕುತ್ತಿವೆ.
ಅದೇ ರೀತಿ ಬಿಹಾರದ ನಿತೀಶ್ ಕುಮಾರ್ ಕೂಡಾ ಕಿಂಗ್ ಮೇಕರ್ ಆಗಲಿದ್ದು ಎನ್ ಡಿ ಎ ಮತ್ತು ಇಂಡಿ ಮಿತ್ರಪಕ್ಷಗಳು ಇವರಿಬ್ಬರ ಬೆನ್ನು ಬಿದ್ದಿವೆ,ಹಾಗಾಗಿ ನಾಯ್ಡು ಮತ್ತು ನಿತೀಶ್ ಕೂಡಾ ತಮ್ಮ ಆಟ ಶುರುವಿಟ್ಟುಕೊಂಡಿದ್ದಾರೆ.
ಮುಂದೇನಾಗುವುದೋ ಯಾರು ಕೇಂದ್ರದಲ್ಲಿ ಪಿಎಂ ಆಗುವರೋ,ಯಾವ ಪಕ್ಷಗಳಿಗೆ ಗದ್ದುಗೆ ಸಿಗುವುದೊ ಕಾದು ನೋಡಬೇಕಿದೆ.