ವರದಿ: ಶಾಂತವೀರ ಹಿರೇಮಠ
ವಿಜಯಪುರ (ಸಿಂದಗಿ): ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತರ ತಂಡ ದಿಢೀರ್ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ನ್ಯೂನ್ಯತೆಗಳ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ ಹಾಗೂ ಡಿವೈಎಸ್ಪಿ ಸುರೇಶ ರಡ್ಡಿ, ಪಿಎಸ್‌ಐ ಆನಂದ ಠಕ್ಕಣ್ಣವರ ಮತ್ತು ಆನಂದ ಡೋಣಿ ಅವರಿದ್ದ ತಂಡ ಆಸ್ಪತ್ರೆಯಲ್ಲಿನ ಶೌಚಾಲಯ, ವಿದ್ಯುತ್ ಕೋಣೆ, ಔಷಧ ಕೇಂದ್ರ, ಕುಡಿಯುವ ನೀರು ಸಮ್ಯಸೆ,
ಸ್ಕ್ಯಾನಿಂಗ್ ಕೋಣೆ, ಪ್ರಯೋಗಾಲಯ ಸೇರಿದಂತೆ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಅವ್ಯವಸ್ಥೆ ಮತ್ತು ನ್ಯೂನ್ಯತೆಗಳನ್ನು ಪರಿಶೀಲಿಸಿ, ಅಧಿಕಾರಿಗಳು ಸಿಬ್ಬಂದಿಗಳಿಂದ ಮಾಹಿತಿ ಪಡೆದರು.
ಇನ್ನು ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿರುವ ಎಲ್ಲಾ ಸಮಸ್ಯೆಗಳ ಬಗ್ಗೆ ಕಳೆದ ತಿಂಗಳು ಪರಿಶೀಲನೆ ಮಾಡಿ ಎಚ್ಚರಿಕೆ ನೀಡಿದರು ಆದರೆ ಅಲ್ಲಿರುವ ಸಮಸ್ಯೆ ಹಾಗೆ ಉಳಿದಿಕೊಂಡಿವೆಂದು ಪತ್ರಕರ್ತರು ಪ್ರಶ್ನೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ ತಿಳಿಸಿದರು.
ಆಸ್ಪತ್ರೆಯ ಪರಿಶೀಲನೆ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಮಾನ್ಯ ಲೋಕಾಯುಕ್ತರ ಆದೇಶದಂತೆ ಜಿಲ್ಲೆಯ ಸರ್ಕಾರಿ ಕಚೇರಿ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇವೆ. ಸರ್ಕಾರಿ ಕಚೇರಿ ಮತ್ತು ಆಸ್ಪತ್ರೆಗಳಲ್ಲಿನಆರೋಗ್ಯಸೇವೆ, ವ್ಯವಸ್ಥೆಗಳಲ್ಲಿನ ಲೋಪ, ಸವಲತ್ತುಗಳ ನಿರ್ವಹಣೆಗಳ ಕುರಿತು ಮಾಹಿತಿ ಪಡೆಯಲಾಗಿದೆ. ಇಲ್ಲಿನ ವ್ಯವಸ್ಥೆ, ಅವ್ಯವಸ್ಥೆಗಳ ಕುರಿತು ಸರ್ಕಾರಕ್ಕೆ ಹಾಗೂ ಲೋಕಾಯುಕ್ತರಿಗೆ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ.