Tue. Dec 24th, 2024

ತಾಯಿಗೆ ಮಗಳ ಅಶ್ಲೀಲ ಫೋಟೋ ಕಳಿಸಿದ ಪ್ರಿಯಕರ

Share this with Friends

ಮೈಸೂರು, ಆ.5: ಮದುವೆ ನಿರಾಕರಿಸಿದ್ದಕ್ಕೆ ಪ್ರಿಯತಮನೊಬ್ಬ ಪ್ರಿಯಕರಳ ಅಶ್ಲೀಲ ಫೋಟೋವನ್ನ ಆಕೆಯ ತಾಯಿಗೆ ಕಳುಹಿಸಿರುವ ವಿಲಕ್ಷಣ ಘಟನೆ ನಗರದಲ್ಲಿ ನಡೆದಿದೆ.

ಯುವಕನ ದುರ್ವರ್ತನೆಗೆ ಬೇಸತ್ತು ಮದುವೆ ನಿರಾಕರಿಸಿದ ಹಿನ್ನಲೆಯಲ್ಲಿ ಪ್ರಿಯಕರ ಹೀಗೆ ಫೋಟೊ ರವಾನಿಸಿ ಸೇಡು ತೀರಿಸಿಕೊಂಡಿದ್ದಾನೆ.

ಈ ಘಟನೆ ಎನ್.ಆರ್.ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಯ್ಡುನಗರದಲ್ಲಿ ನಡೆದಿದ್ದು,ಮಗಳ ಅಶ್ಲೀಲ ಫೋಟೋ ನೋಡಿ ಗಾಬರಿಗೊಂಡ ತಾಯಿ ಎನ್.ಆರ್.ಪೊಲೀಸ್ ಠಾಣೆ‌ಗೆ ದೂರು ನೀಡಿದ್ದಾರೆ.

ಕಲ್ಯಾಣಗಿರಿ ನಿವಾಸಿ ಮೊಹಮದ್ ವಾಸೀಂ ಮೇಲೆ ಎಫ.ಐ.ಆರ್.ದಾಖಲಾಗಿದ್ದು‌ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ನೊಂದ ಯುವತಿಗೆ ಮೊಹಮದ್ ವಾಸೀಂ ಪರಿಚಯವಾಗಿದ್ದಾನೆ.ಇಬ್ಬರೂ ಒಂದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಸಲುಗೆ ಬೆಳೆದಿದೆ.

ಯುವತಿಯನ್ನ ಮದುವೆ ಆಗಲು ನಿರ್ಧರಿಸಿ ತಾಯಿಗೆ ವುಷಯ ತಿಳಿಸಿ‌ ಮದುವೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಪ್ರಾರಂಭದಲ್ಲಿ ನಿರಾಕರಿಸಿದ ತಾಯಿ ನಂತರ ಹುಡುಗನ ಮನೆಯವರ ಒತ್ತಡಕ್ಕೆ ಮಣಿದು ಒಪ್ಪಿಗೆ ನೀಡಿದ್ದಾರೆ.

ನಿಶ್ಚಿತಾರ್ಥವೂ ಆಗಿದೆ, ನಂತರ ಇಬ್ಬರೂ ಅಲ್ಲಿ,ಇಲ್ಲಿ ಸುತ್ತಾಡಿದ್ದಾರೆ.ಈ ವೇಳೆ ಯುವತಿಯ ಅಶ್ಲೀಲ ಫೋಟೋಗಳನ್ನು ಮಹಮದ್ ವಾಸೀಂ ಪಡೆದಿದ್ದಾನೆ.

ಕೆಲವೇ ದಿನಗಳಲ್ಲಿ ಮಹಮದ್ ವಾಸೀಂ ವರ್ತನೆಯಿಂದ ಯುವತಿ ಬೇಸರಗೊಂಡು ಮದುವೆ ನಿರಾಕರಿಸಿದ್ದಾರೆ.

ಆದರೆ ಹಟ ಹಿಡಿದ ಮಹಮದ್ ವಾಸೀಂ ಮದುವೆ ಮಾಡಿಕೊಡಿ ಇಲ್ಲದಿದ್ದರೆ ಅಶ್ಲೀಲ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಮಹಮದ್ ವಾಸೀಂ ಬೆದರಿಕೆಗೆ ಮಣಿಯದ ಕಾರಣ ಯುವತಿಯ ತಾಯಿಗೆ ಅಶ್ಲೀಲ ಫೋಟೋ ರವಾನಿಸಿ ಸೇಡು ತೀರಿಸಿಕೊಂಡಿದ್ದಾನೆ.

ಮಹಮದ್ ವಾಸೀಂ ವಿರುದ್ಧ ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this with Friends

Related Post