Sat. Nov 2nd, 2024

ಹಬ್ಬ,ಬಿಸಿಲಿನ ನಡುವೆಯೂ ಎಂ.ಲಕ್ಷ್ಮಣ್ ಮತ ಯಾಚನೆ

Share this with Friends

ಮೈಸೂರು,ಏ.9: ಯುಗಾದಿ ಹಬ್ಬದ ದಿನವೂ ಕೂಡಾ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ ಅವರು ಸುಡು ಬಿಸಿಲ ನಡುವೆಯೇ ಮತ ಯಾಚನೆ ಮಾಡಿದರು.

ಮೊದಲು ಬಂಬೂಬಜಾರ್ ನಲ್ಲಿರುವ ಮೈಸೂರು ಕ್ರೈಸ್ತರ ಹಿತರಕ್ಷಣಾ ರಕ್ಷಣಾ ವೇದಿಕೆಯ ಸಭೆಗೆ ಭೇಟಿ ನೀಡಿ ಮತಯಾಚಿಸಿದರು.

ಸಭೆಯಲ್ಲಿ ಲಕ್ಷ್ಮಣ್ ಅವರ ಬಳಿ ಕ್ರೈಸ್ತ ಸಮುದಾಯದ ಮುಖಂಡರು ಕಷ್ಟಗಳನ್ನು ಹೇಳಿಕೊಂಡರು ಜತೆಗೆ ನಮ್ಮ ಧರ್ಮದವರಿಗೆ ಸ್ಮಶಾನದ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು. ಖಂಡತಾ ನಾನು ಗೆದ್ದ ಬಳಿಕ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

ಸಭೆಯಲ್ಲಿ ಲಕ್ಷ್ಮಣ ರವರನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಬೇಕೆಂದು ಕ್ರೈಸ್ತರ ಹಿತರಕ್ಷಣಾ ವೇದಿಕೆ ಸದಸ್ಯರು ಎಲ್ಲಾ ಸೇರಿ ದೇವರಲ್ಲಿ ಪ್ರಾರ್ಥನೆ ಮಾಡಿದರಲ್ಲದೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದರು.

ಈ ವೇಳೆ ಎಂ ಲಕ್ಷ್ಮಣ್ ಮಾತನಾಡಿ ಸಾಮಾನ್ಯ ಕಾರ್ಯಕರ್ತನಾದ ನನಗೆ ನಮ್ಮ ಪಕ್ಷ ಟಿಕೆಟ್ ಕೊಟ್ಟಿರುವುದು ಹೆಮ್ಮೆ ತಂದಿದೆ, ನಾನು ಯಾವುದೇ ರಿಯಲ್ ಎಸ್ಟೇಟ್ ಮತ್ತಿತರ ಬ್ಯುಸಿನೆಸ್ ಮಾಡುವವನಲ್ಲ ನಾನು ಸಾಮಾನ್ಯನಲ್ಲಿ ಸಾಮಾನ್ಯ ವ್ಯಕ್ತಿ ಎಂದು ಹೇಳಿದರು.

ಹತ್ತು ವರ್ಷದಿಂದ ಮೈಸೂರಿನಲ್ಲಿ ಇದ್ದಿದ್ದು ಪ್ರತಾಪ್ ಸಿಂಹ. ಅಭಿವೃದ್ದಿ ಕಾರ್ಯಗಳನ್ನು ಮಾಡದೆ ಹಿಂದೂ ಮತ್ತು ಮುಸ್ಲಿಂ ಜನಗಳ ಮದ್ಯೆ ಮನಸ್ತಾಪ ಉಂಟು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಗ್ಯಾರಂಟಿ ನೀಡಿದ್ದೇವೆ. ಬಿಜೆಪಿ ಸರಕಾರ ಇದ್ದಾಗ 40% ಕಮಿಷನ್ ಹೊಡೆದು ರಾಜ್ಯವನ್ನು ಹಾಳು ಮಾಡಿದ್ದಾರೆ. ಬಿಜೆಪಿ ಸರಕಾರ 140 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಪ್ರತಿ ವ್ಯಕ್ತಿಯ ತಲೆ ಮೇಲೆ 3 ಲಕ್ಷ ಸಾಲ ಹೊರೆ ಹೊರಿಸಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಜೆಇ‌ಎಸ್ ಯುಎಸ್ ಅಧ್ಯಕ್ಷ ಮೋಹನ್ ದಾಸ್,ಕಾರ್ಯದರ್ಶಿ ಪ್ರೇಮ್ ಕುಮಾರ್, ಬರ್ನಲ್ಡ್ ಮತ್ತಿತರರು ಹಾಜರಿದ್ದರು.


Share this with Friends

Related Post